
ಹಾಸನ(ಮೇ.06): ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಬಯಲಾಗಿದೆ. ಅರಸೀಕೆರೆಯ ಲೇಡಿ ಗ್ಯಾಂಗೊಂದು ಮಕ್ಕಳ ಮಾರಾಟ ಮಾಡೋ ದಂಧೆಯಲ್ಲಿ ತೊಡಗಿದೆ. ಅರಸೀಕೆರೆಯ ಬಡ ಕುಟುಂಬದ ಬಾಲಕಿಯನ್ನು ಪಕ್ಕದ ಮನೆಯವಳೇ ರಾಜಸ್ಥಾನಕ್ಕೆ, 3 ಲಕ್ಷ ಹಣಕ್ಕೆ ಮಾರಾಟ ಮಾಡಿದ್ದಳು. 2016ರ ಸೆಪ್ಟೆಂಬರ್ 29ರಂದು ಬಾಲಕಿ ನಾಪತ್ತೆಯಾಗಿದ್ದಳು. ಎಲ್ಲೊ ಇದ್ದಾಳೆ, ಬರಬಹುದೆಂದು ತಾಯಿ ಕಾದಿದ್ದಳು. ಆದರೆ 6 ತಿಂಗಳಾದರೂ ಮನೆಗೆ ವಾಪಸ್ ಆಗಲಿಲ್ಲ. ಒಂದೂವರೆ ತಿಂಗಳ ಹಿಂದೆ ಆ ಬಾಲಕಿಯೇ ತಾಯಿಗೆ ಕರೆ ಮಾಡಿದ್ದಳು. ನಂತರ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಸಮಿತಿಗೆ ತಾಯಿ ದೂರು ನೀಡಿದ್ದಳು. ಆ ದೂರಿನನ್ವಯ ಹಾಸನ ಪೊಲೀಸರು ಬಾಲಕಿ ಇರಿಸಿದ್ದ ಜಾಡು ಹಿಡಿದು ಬಾಲಕಿಯನ್ನು ರಕ್ಷಿಸಿ ಹಾಸನಕ್ಕೆ ಕರೆ ತಂದಿದ್ದಾರೆ. ದುರಂತ ಅಂದರೆ, ಮಾರಾಟ ಮಾಡಿದ ಮಹಿಳೆ, ಈ ಬಾಲಕಿಯನ್ನು ರಾಜಸ್ಥಾನದಲ್ಲಿ ಲಾರಿ ಚಾಲಕನ ಜೊತೆ ಮದುವೆ ಮಾಡಿಸಿದ್ದಾಳೆ. ಸದ್ಯ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಬಾಲಮಂದಿರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.