ದಾವೂದ್ ಬಲಗೈ ಬಂಟ ಚೋಟಾ ಶಕೀಲ್ ಮೃತನಾದನೆ ? ಕೊಲೆಯಲ್ಲಿ ಐಎಸ್ಐ ಕೈವಾಡ ಶಂಕೆ ?

By Suvarna Web DeskFirst Published Dec 20, 2017, 4:14 PM IST
Highlights

ಭೂಗತಜಗತ್ತಿನ ಮೂಲಗಳ ಪ್ರಕಾರ ಚೋಟಾ ಶಕೀಲ್ ಈ ವರ್ಷದ ಜನವರಿ 6ರಂದೆ ಇಸ್ಲಾಮಾಬಾದ್'ನಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮುಂಬೈ(ಡಿ.20): ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂ ನಂಬಿಕಸ್ತ ಬಲಗೈ ಬಂಟ ಚೋಟಾ ಶಕೀಲ್ ಮೃತನಾಗಿರುವ ಸುದ್ದಿ ಭೂಗತ ವಲಯದಲ್ಲಿ ಹರಿದಾಡುತ್ತಿದೆ.

ಶಕೀಲ್ ಗ್ಯಾಂಗ್'ನ ಸದಸ್ಯ ಹಾಗೂ ಮುಂಬೈ ಮೂಲದ ಶಕೀಲ್ ಸಂಬಂಧಿ ಒಬ್ಬರ ನಡುವೆ ನಡೆದಿರುವ ಸಂಭಾಷಣೆಯಲ್ಲಿ ಸಾವನ್ನಪ್ಪಿರುವ ಸುದ್ದಿ ಹರಿದಾಡುತ್ತಿದ್ದು, ಆದರೆ ಇದು ಅಧಿಕೃತ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಮುಂಬೈ ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಅಧಿಕಾರಿಗಳು 2 ರೀತಿಯ ಸಾಧ್ಯತೆಗಳನ್ನು ವ್ಯಕ್ತಪಡಿಸಿದ್ದಾರೆ.

ಭೂಗತಜಗತ್ತಿನ ಮೂಲಗಳ ಪ್ರಕಾರ ಚೋಟಾ ಶಕೀಲ್ ಈ ವರ್ಷದ ಜನವರಿ 6ರಂದೆ ಇಸ್ಲಾಮಾಬಾದ್'ನಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಕೆಲವರು ಹೇಳಿದರೆ, ಮತ್ತೊಂದು ಮೂಲದ ಪ್ರಕಾರ ಪಾಕ್ ಗುಪ್ತಚರ ಇಲಾಖೆ ಐಎಸ್ಐ ಈತನ ಹತ್ಯೆ ಮಾಡಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈತನ ಮೃತಪಟ್ಟ 2 ದಿನಗಳ ನಂತರ ಶಕೀಲ್ 2ನೇ ಪತ್ನಿ ಆಯಿಶಾ ಹಾಗೂ ಆತನ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಕರಾಚಿಯ ನಿವಾಸದ ಬಳಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎನ್ನಲಾಗಿದೆ.  ಅಂತ್ಯ ಸಂಸ್ಕಾರದ ನಂತರ ಕರಾಚಿಯ ಮನೆಯನ್ನು ಖಾಲಿ ಮಾಡಿರುವ ಆತನ ಕುಟುಂಬ ಸದಸ್ಯರು ಲಾಹೋರ್'ನ ಐಎಸ್ಐ'ನ ಸುರಕ್ಷಿತ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.

ಖಿನ್ನತೆಯಲ್ಲಿ ದಾವೂದ್ ?

ತನ್ನ ನಂಬಿಕಸ್ತ ಬಂಟ ಶಕೀಲ್ ಮೃತನಾದ ನಂತರ ದಾವೂದ್ ಇಬ್ರಾಹಿಂ ಖಿನ್ನತೆಗೊಳಗಾಗಿದ್ದು ಆತನ ಆರೋಗ್ಯತಿ ಕೂಡ ಹದಗೆಟ್ಟಿದೆ. ಹಲವು ಬಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಭೂಗತ ವ್ಯವಹಾರದಲ್ಲಿ ಹೆಚ್ಚು ಆಸಕ್ತನಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

click me!