ಮಂಡ್ಯದ ವಿಳಾಸದಲ್ಲಿ ನಕಲಿ ಪಾಸ್'ಪೋರ್ಟ್: ಚೋಟಾ ರಾಜನ್'ಗೆ 7 ವರ್ಷ ಜೈಲು

Published : Apr 25, 2017, 12:33 PM ISTUpdated : Apr 11, 2018, 12:55 PM IST
ಮಂಡ್ಯದ ವಿಳಾಸದಲ್ಲಿ ನಕಲಿ ಪಾಸ್'ಪೋರ್ಟ್: ಚೋಟಾ ರಾಜನ್'ಗೆ 7 ವರ್ಷ ಜೈಲು

ಸಾರಾಂಶ

ಶಿಕ್ಷೆಯ ಜೊತೆ ಪ್ರತಿಯೊಬ್ಬರಿಗೂ 15 ಸಾವಿರ ದಂಡ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಧೀಶರಾದ  ವೀರೇಂದ್ರ ಕುಮಾರ್ ಗೋಯಲ್ ಅವರು ಪಾಟಿಯಾಲ ಹೌಸ್ ಕೋರ್ಟ್'ನಲ್ಲಿ ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದರು.

ನವದೆಹಲಿ(ಏ.25): ಮಂಡ್ಯದ ವಿಳಾಸದಲ್ಲಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ 1998-99ರಲ್ಲಿ ನಕಲಿ ಪಾಸ್'ಪೋರ್ಟ್ ಪಡೆದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಭೂಗತ ಪಾತಕಿ ಚೋಟಾ ರಾಜನ್' ಹಾಗೂ ಈತನಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಮೂವರು ಮಾಜಿ ಪಾಸ್'ಪೋರ್ಟ್ ಅಧಿಕಾರಿಗಳಿಗೆ 7 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.

ಶಿಕ್ಷೆಯ ಜೊತೆ ಪ್ರತಿಯೊಬ್ಬರಿಗೂ 15 ಸಾವಿರ ದಂಡ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಧೀಶರಾದ  ವೀರೇಂದ್ರ ಕುಮಾರ್ ಗೋಯಲ್ ಅವರು ಪಾಟಿಯಾಲ ಹೌಸ್ ಕೋರ್ಟ್'ನಲ್ಲಿ ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದರು.

ಇವರ ಮೇಲೆ ವಂಚನೆ,ದಾಖಲೆ ತಿರುಚುವಿಕೆ,ಉದ್ದೇಶಪೂರ್ವಕವಾಗಿ ದಾಖಲೆ ತಿರುಚುವಿಕೆ, ಒಳ ಸಂಚು ಮುಂತಾದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ರಾಜನ್ ವಿರುದ್ದ ದೇಶಾದ್ಯಂತ 85ಕ್ಕೂ ಹೆಚ್ಚು ವಿವಿಧ ಆರೋಪಗಳ ಪ್ರಕರಣಗಳಿವೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Maruti Swift vs Hyundai i20 Car: ಮಾರುತಿ, ಹುಂಡೈ ಕಾರ್‌ ಮಧ್ಯೆ ಮತ್ತೆ ಕಾರ್‌ ಮಾರೋಕೆ ಯಾವುದು ಬೆಸ್ಟ್
ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ, ಪುಸರಖಿತಸ ರಹಸ್ಯ ಬಯಲು