ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!

Published : May 08, 2019, 08:27 AM IST
ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!

ಸಾರಾಂಶ

ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!| ಛತ್ತೀಸ್‌ಗಢದಲ್ಲಿ ಅಸ್ತಿತ್ವಕ್ಕೆ ಬಂದು ನಕ್ಸಲ್‌ ನಿಗ್ರಹ ಮಹಿಳಾ ಪಡೆ| 30 ಮಂದಿ ಕಮಾಂಡೋ ಪಡೆ ಸದಸ್ಯರಲ್ಲಿ ಅರ್ಧಕ್ಕರ್ಧ ಮಂದಿ ಶರಣಾಗತ ನಕ್ಸಲರು| 10ಕ್ಕೂ ಹೆಚ್ಚು ಮಂದಿ ನಕ್ಸಲ್‌ ನಿಗ್ರಹ ‘ಸಲ್ವಾ ಜುದುಂ’ ಚಳುವಳಿಯಲ್ಲಿ ಪಾಲ್ಗೊಂಡ ಸಹಾಯಕ ಪೇದೆಗಳು

ರಾಯ್‌ಪುರ[ಮೇ.08]: ಛತ್ತೀಸ್‌ಗಢ ಪೊಲೀಸರು ಇದೇ ಮೊದಲ ಬಾರಿಗೆ ನಕ್ಸಲ್‌ ನಿಗ್ರಹ ಮಹಿಳಾ ಕಮಾಂಡೋ ದಳವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ಪಡೆಯಲ್ಲಿರುವ 30 ಮಹಿಳೆಯರಲ್ಲಿ 10ಕ್ಕೂ ಹೆಚ್ಚು ಮಂದಿ ಈ ಹಿಂದೆ ನಕ್ಸಲರೇ ಆಗಿದ್ದರು.

ರಾಜ್ಯದಲ್ಲಿ ನಕ್ಸಲರ ಉಪಟಳ ಹೆಚ್ಚಿದ ಹಿನ್ನೆಲೆಯಲ್ಲಿ ನಿಗ್ರಹಕ್ಕೆ ಪಣ ತೊಟ್ಟಿರುವ ಪೊಲೀಸ್‌ ಇಲಾಖೆ ಭದ್ರತಾ ಪಡೆ ಜೊತೆ ನಕ್ಸಲ್‌ ಪೀಡಿತ ಪ್ರದೇಶವಾದ ದಂತೇವಾಡಾ ಜಿಲ್ಲೆಯ ಮಲಂಗೀರ್‌ ವಲಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲೆಂದೇ ಮಹಿಳಾ ಕಮಾಂಡೋಗಳ ಪಡೆ ರಚಿಸಿದೆ. ನಕ್ಸಲ ನಿಗ್ರಹಕ್ಕೆ ಈ ಪಡೆ ಮುಂಚೂಣಿಯಲ್ಲಿದ್ದು, ಕಾರ್ಯಾಚರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶರಣಾಗತ ನಕ್ಸಲರಿವರು!:

ಪ್ರತ್ಯೇಕ ಸಂದರ್ಭಗಳಲ್ಲಿ ಪೊಲೀಸರಿಗೆ ಶರಣಾದ 30ಕ್ಕೂ ಹೆಚ್ಚು ಮಹಿಳಾ ನಕ್ಸಲರೇ ಈ ನಕ್ಸಲ್‌ ನಿಗ್ರಹ ಕಮಾಂಡೋ ಪಡೆಯ ಸದಸ್ಯರಾಗಿದ್ದಾರೆ. ಶರಣಾಗರ ಮಹಿಳಾ ನಕ್ಸಲರಿಗೆ ಹೊಸ ಜೀವನದ ಭರವಸೆ ಮೂಡಿಸಿ, ಅವರ ಮನೋಬಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ಇಲಾಖೆ ಅವರನ್ನೇ ಮಹಿಳಾ ಪಡೆಗೆ ನೇಮಕ ಮಾಡಿಕೊಂಡಿದ್ದು, ಜಂಗಲ್‌ ಕಾಂಬ್ಯಾಟ್‌ನಲ್ಲೇ ಸೂಕ್ತ ತರಬೇತಿ ನೀಡಿಸಲಾಗಿದೆ ಎಂದು ದಂತೆವಾಡಾ ಎಸ್ಪಿ ಅಭಿಷೇಕ್‌ ಪಲ್ಲವ ಮತ್ತು ಡಿಎಸ್‌ಪಿ ದಿನೇಶ್ವರಿ ನಂದ್‌ ಮಾಹಿತಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು