ಪಟಾಕಿ ಮಾತ್ರ ಏಕೆ, ಬಕ್ರೀದ್'ಗೆ 'ಕುರಿ' 'ಕ್ರಿಸ್'ಮಸ್ ಟ್ರೀ'ಗಳನ್ನುಏಕೆ ನಿಷೇಧಿಸಲ್ಲ ?

Published : Oct 09, 2017, 07:55 PM ISTUpdated : Apr 11, 2018, 01:00 PM IST
ಪಟಾಕಿ ಮಾತ್ರ ಏಕೆ, ಬಕ್ರೀದ್'ಗೆ 'ಕುರಿ' 'ಕ್ರಿಸ್'ಮಸ್ ಟ್ರೀ'ಗಳನ್ನುಏಕೆ ನಿಷೇಧಿಸಲ್ಲ ?

ಸಾರಾಂಶ

ಮತ್ತೊಬ್ಬ ಕ್ರಿಕೆಟಿಗ ಯುವರಾಜ್ ಸಿಂಗ್ ನಿಷೇಧವನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದು ' ಈ ಬಾರಿ ನಾವು ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸೋಣ' ಎಂದಿದ್ದಾರೆ.

ನವದೆಹಲಿ(ಅ.09): ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿಯನ್ನು ನಿಷೇಧಿಸಿರುವುದಕ್ಕೆ ಆಂಗ್ಲ ಲೇಖಕ ಚೇತನ್ ಭಗತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್'ಗಳನ್ನು ಮಾಡಿರುವ ಅವರು ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್ ಪಟಾಕಿಗಳನ್ನು ನಿಷೇಧಿಸಿದೆ. ಪಟಾಕಿಯಿಲ್ಲದೆ ಮಕ್ಕಳು ಹೇಗೆ ಹಬ್ಬವನ್ನು ಸಂಭ್ರಮಿಸುತ್ತಾರೆ. ಹಿಂದು ಹಬ್ಬಗಳಿಗೆ ತೋರುವ ಧೈರ್ಯವನ್ನು ಮುಸ್ಲಿಂ ಹಬ್ಬಗಳಲ್ಲಿ ಕುರಿಗಳನ್ನು ಹಾಗೂ ಕ್ರಿಸ್'ಮಸ್ ಹಬ್ಬದಂದು ಟ್ರೀಗಳನ್ನು ನಿಷೇಸಲು ತೋರುತ್ತಾರಾ ಎಂದು ಪ್ರಶ್ನಿಸಿದ್ದಾರೆ'. ಈ ರೀತಿ ಹೇಳಿರುವ ಚೇತನ್ ಭಗತ್ ನಿಷೇಧಿಸುವ ಬದಲು ಸಂಪ್ರದಾಯಗಳನ್ನು ಗೌರವಿಸಿ .

ಇದಕ್ಕೆ ಕೆಲ ಟ್ವಿಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾಗ

ಕ್ರಿಕೆಟಿಗರ ಸ್ವಾಗತ

ಮಾಜಿ ಕ್ರಿಕೆಟಿಗ  ವೀರೇಂದ್ರ ಸೆಹ್ವಾಗ್ ಪಟಾಕಿ ನಿಷೇಧವನ್ನು ಸ್ವಾಗತಿಸಿದ್ದು, ಈ ಬಾರಿ ನೀವು ವಿಭಿನ್ನ ರೀತಿಯಲ್ಲಿ ಆಚರಿಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಕ್ರಿಕೆಟಿಗ ಯುವರಾಜ್ ಸಿಂಗ್ ನಿಷೇಧವನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದು ' ಈ ಬಾರಿ ನಾವು ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸೋಣ' ಎಂದಿದ್ದಾರೆ. ನ್ಯಾಯಮೂರ್ತಿ ಎ.ಕೆ. ಸಿನ್ಹಾ ನೇತೃತ್ವದ ಪೀಠವು ಹಿಂದೆ ಅಕ್ಟೋಬರ್ 31ರ ತನಕ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಿ ತೀರ್ಪು ನೀಡಿದೆ.

ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಕೋರಿ ಸುಡುಮದ್ದು ಮಾರಾಟಗಾರರ ಸಂಘವು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಪರಿಸರದ ಮೇಲೆ ಸುಡುಮದ್ದುಗಳು ಬೀರಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನವಂಬರ್’ 25ರಂದು ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟವನ್ನು ನಿಷೇಧಿಸಿತ್ತು.

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!