ಕೈ ಮುಖಂಡ ಚೆಲುವರಾಯ ಸ್ವಾಮಿ ನೀಡಿದ ಹೊಸ ಸುಳಿವು!

By Web DeskFirst Published May 10, 2019, 8:11 AM IST
Highlights

ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಇದೀಗ ಹೊಸ ಸುಳಿವೊಂದನ್ನು ನೀಡಿದ್ದಾರೆ. ಏನದು ? ಇಲ್ಲಿದೆ ಮಾಹಿತಿ.

ಮಂಡ್ಯ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ ಆಡಳಿತದ ವಿರುದ್ಧ ತನಿಖೆ ಆರಂಭಿಸಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಜತೆಗೆ, ಇದೆಲ್ಲ ಒಳ್ಳೆಯದಲ್ಲ, ಬಹಳ ದಿನ ನಡೆಯುವುದೂ ಇಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎನ್‌.ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ಆ ಸಂಸ್ಥೆಯನ್ನು ಗೌರವಯುತವಾಗಿ ನಡೆಸುತ್ತಿದ್ದಾರೆ. ಅವ್ಯವಹಾರ ಮಾಡದೆ ಆಡಳಿತ ನಡೆಸುತ್ತಿದ್ದಾರೆ ಎಂಬುದನ್ನು ಕೇಳಿದ್ದೇನೆ. ಆದರೂ ತಮ್ಮ ವಿರುದ್ಧ ಸ್ವಲ್ಪ ಒರಟಾಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಅಪೆಕ್ಸ್‌ ಬ್ಯಾಂಕ್‌ನ ವ್ಯವಹಾರದ ಕುರಿತು ತನಿಖೆ ಆರಂಭಿಸಿದೆ. ಅಧಿಕಾರಿಗಳು ಬ್ಯಾಂಕ್‌ನಲ್ಲೇ ಬೀಡುಬಿಟ್ಟು ತನಿಖೆ ಶುರುಮಾಡಿದ್ದಾರೆ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಲೋಕಸಭಾ ಚುನಾವಣೆ ವೇಳೆ ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆ ವಿರುದ್ಧ ಗುಡುಗಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎನ್ನುವ ಪರೋಕ್ಷ ಆರೋಪವನ್ನು ಮಾಜಿ ಸಚಿವ ಮಾಡಿದರು.

ಇದೇ ವೇಳೆ, ಒಂದು ವೇಳೆ ಸರ್ಕಾರ ಈಗ ತನಿಖೆ ನಡೆಸಿದರೂ ಅಲ್ಲಿ ಅವರದ್ದೇ ಪಕ್ಷದವರ ಅವ್ಯವಹಾರ ಬಯಲಿಗೆ ಬರಲಿದೆ. ಯಾಕೆಂದರೆ ಅಲ್ಲಿ ತಿಂದು, ತೇಗಿ, ನುಂಗಿದ ಮಂಜುನಾಥ ಗೌಡ ಅವರು ಈಗ ಜೆಡಿಎಸ್‌ನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿದ್ದಾರೆ. ಆದರೂ ಅದೆಲ್ಲವನ್ನು ಮುಚ್ಚಿಟ್ಟು ರಾಜಣ್ಣ ಅವರ ಮೇಲೆ ತಪ್ಪು ಹೊರೆಸುವ ಕೆಲಸ ಆದರೂ ಆಗಬಹುದು ಎಂಬ ಅನುಮಾನವನ್ನೂ ಚಲುವರಾಯಸ್ವಾಮಿ ವ್ಯಕ್ತಪಡಿಸಿದರು.

ಏತನ್ಮಧ್ಯೆ ಕೋ-ಆಪರೇಟಿವ್‌ ಅಧಿಕಾರಿಗಳನ್ನು ಈಗ ನಂಬಲು ಸಾಧ್ಯವಿಲ್ಲ ಎಂದ ಚಲುವರಾಯಸ್ವಾಮಿ, ಅವರು ಹೆಣ್ಣನ್ನು-ಗಂಡು ಮಾಡ್ತಾರೆ, ಅವ್ವನನ್ನು-ಅಪ್ಪ ಮಾಡುತ್ತಾರೆ. ಆದರೆ, ಇದೆಲ್ಲ ಒಳ್ಳೆಯ ಬೆಳವಣಿಗೆ ಅಲ್ಲ, ಇದು ಬಹಳ ದಿನ ನಡೆಯಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ ಆಡಳಿತದ ವಿರುದ್ಧ ತನಿಖೆ ಆರಂಭಿಸಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಜತೆಗೆ, ಇದೆಲ್ಲ ಒಳ್ಳೆಯದಲ್ಲ, ಬಹಳ ದಿನ ನಡೆಯುವುದೂ ಇಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

click me!