
ಮಂಡ್ಯ : ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಇದೊಂದು ರಾಜಕೀಯ ಸ್ಟಂಟ್ ಎಂದು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಟೀಕಿಸಿದ್ದಾರೆ.
ಗ್ರಾಮ ವಾಸ್ತವ್ಯದಿಂದ ಯಾವುದೇ ಬದಲಾವಣೆಗಳೂ ಆಗದು. ಕೆಲ ಮಾಡುವ ಮೂಲಕ ಜನರ ಹತ್ತಿರ ತೆರಳಬೇಕೆ ಹೊರತು, ಈ ರೀತಿ ಗ್ರಾಮ ವಾಸ್ತವ್ಯದಿಂದ ಒಂದಿಬ್ಬರು ಬಡವರನ್ನು ಮಾತನಾಡಿಸಿ ಅಲ್ಲ ಸಂಪೂರ್ಣ ರಾಜ್ಯದ ಬಡತನ ನಿವಾರಣೆ ಮಾಡುವ ಯತ್ನ ಮಾಡಬೇಕು ಎಂದರು.
ಸಂಕಷ್ಟದಲ್ಲಿ ಇರುವವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಮಾಡಬೇಕು. ಅದನ್ನು ಬಿಟ್ಟು ಸಿಕ್ಕ ಸಿಕ್ಕ ಕಡೆ ಫೋಟೋ ತೆಗೆಸಿಕೊಂಡು ಸಹಾಯ ಮಾಡಿದ್ದಾಹಿ ಹೇಳಿಕೊಳ್ಳುವುದಲ್ಲ ಎಂದಿ ಚೆಲುವರಾಯಸ್ವಾಮಿ ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸಹಾಯ ಮಾಡುವುದು ದೊಡ್ಡಸ್ತಿಕೆ ಅಲ್ಲ. ಸಿಎಂ ಆದವರು ಈ ನಾಡಿನ 6 ಕೋಟಿ ಜನರಿಗೂ ಸಹಾಯವಾಗುವಂತೆ ಕೆಲಸ ಮಾಡಬೇಕು. ಈ ರೀತಿಯ ಗ್ರಾಮ ವಾಸ್ತವ್ಯದಿಂದ ಖಂಡಿತಾ ಯಾವು ಪ್ರಯೋಜನವಿಲ್ಲ ಎಂದು ಸಿಎಂ ಮಾಜಿ ಆಪ್ತ ಚೆಲುವರಾಯಸ್ವಾಮಿ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.