
ಬೆಂಗಳೂರು(ನ.27): 9.9 ಕೋಟಿ ವಂಚನೆ ಆರೋಪದಡಿ ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸೇರಿ ಆರು ಮಂದಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ ಸಿ-ಸ್ಟೋರ್ ಕಂಪನಿ ಅಧಿಕಾರಿ ನವೀನ್‌ಕುಮಾರ್ ಎಂಬುವರು ಫ್ಲಿಫ್ ಕಾರ್ಟ್ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಮೇರೆಗೆ ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ಮಾರುಕಟ್ಟೆ ನಿರ್ದೇಶಕ ಹರಿ, ಅಕೌಂಟೆಂಟ್‌ಗಳಾದ ಸುಮಿತ್ ಆನಂದ್, ಸಾರಾಕ್ಯೂ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫ್ಲಿಪ್‌ಕಾರ್ಟ್ ಕಂಪನಿಗೆ ಲ್ಯಾಪ್‌ಟಾಪ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡಲು ಸಿ-ಸ್ಟೋರ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಜೂನ್ 2015ರಿಂದ 2016 ಜೂನ್ ನಡುವೆ ‘ಬಿಗ್ ಬಿಲಿಯನ್ ಡೇ ಸೇಲ್’ ಎಂಬ ಹೆಸರಿನಲ್ಲಿ ಫ್ಲಿಪ್‌ಕಾರ್ಟ್‌ಗೆ 14 ಸಾವಿರ ಲ್ಯಾಪ್‌ಟಾಪ್ ಪೂರೈಕೆ ಮಾಡಲಾಗಿದೆ.
ಈ ಪೈಕಿ 1482 ಲ್ಯಾಪ್‌ಟಾಪ್ ವಾಪಸ್ ಕೊಟ್ಟಿದ್ದಾರೆ. ಬಾಕಿ ಸರಕಿಗೆ ಹಣ ಪಾವತಿ ಮಾಡಿಲ್ಲ. ಸಾಗಣೆ ಶುಲ್ಕ ಸಹ ಕೊಟ್ಟಿಲ್ಲ. ಕಂಪನಿ ಅಧಿಕಾರಿಗಳನ್ನು ವಿಚಾರಿಸಿದಾಗ 3901 ಲ್ಯಾಪ್ ಟಾಪ್ ವಾಪಸ್ ಕೊಟ್ಟಿರುವುದಾಗಿ ಸುಳ್ಳು ಲೆಕ್ಕಾ ನೀಡಿದ್ದಾರೆ. ಇದೇ ರೀತಿ ಫ್ಲಿಪ್‌ಕಾರ್ಟ್ ಒಟ್ಟು 9.92 ಕೋಟಿ ಹಣ ನೀಡದೆ ವಂಚಿಸಿದೆ ನವೀನ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.