ಉತ್ತರ ಪ್ರದೇಶದಲ್ಲಿರಬೇಕಾದರೆ ಯೋಗಿ ಯೋಗಿ ಜಪಿಸಬೇಕು: ಮೀರಠ್'ನಲ್ಲಿ ಹೋರ್ಡಿಂಗ್ ಬರಹ

By Suvarna Web DeskFirst Published Apr 15, 2017, 4:50 PM IST
Highlights

ಹೋರ್ಡಿಂಗ್’ನಲ್ಲಿ ಯುವ ವಾಹಿನಿಯ ಜಿಲ್ಲಾಧ್ಯಕ್ಷ ನೀರಜ್ ಕುಮಾರ್ ಪಾಂಚಾಲಿ ಜತೆ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಕೂಡಾ ಹಾಕಲಾಗಿದೆ.

ಮೀರಠ್ (ಏ. 15): ಉತ್ತರ ಪ್ರದೇಶದಲ್ಲಿ ಜೀವಿಸಬೇಕಾದರೆ ‘ಯೋಗಿ ಯೋಗಿ’ ಜಪಿಸಬೇಕು ಎಂದು ಹೇಳಿರುವ ಹೋರ್ಡಿಂಗ್’ಗಳು ಮೀರಠ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆಯೆಂಬ ಆಘಾತಕಾರಿ ಸುದ್ದಿ ವರದಿಯಾಗಿದೆ. ಯೋಗಿ ಆದಿತ್ಯನಾಥ್ ಸ್ಥಾಪಿಸಿರುವ ಹಿಂದೂ ಯುವವಾಹಿನಿಯ ಜಿಲ್ಲಾ ಘಟಕವು ಈ ಹೋರ್ಡಿಂಗ್’ಗಳನ್ನು ಹಾಕಿದೆಯೆನ್ನಲಾಗಿದೆ.

ಬೆಚ್ಚಿಬೀಳಿಸುವ ಸಂಗತಿಯೆಂದರೆ ಈ ಹೋರ್ಡಿಂಗ್’ಗಳನ್ನು ಹಿರಿಯ ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಬಳಿಯೇ ಹಾಕಲಾಗಿದೆ ಎಂಉ ಪಿಟಿಐ ವರದಿ ಮಾಡಿದೆ.

Latest Videos

ಹೋರ್ಡಿಂಗ್’ನಲ್ಲಿ ಯುವ ವಾಹಿನಿಯ ಜಿಲ್ಲಾಧ್ಯಕ್ಷ ನೀರಜ್ ಕುಮಾರ್ ಪಾಂಚಾಲಿ ಜತೆ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಕೂಡಾ ಹಾಕಲಾಗಿದೆ.

ಹೋರ್ಡಿಂಗ್ ಹಾಕಿರುವ ಕುರಿತು ಸ್ಥಳೀಯ ಗುಪ್ತಚರ ಇಲಾಖೆಯಿಂದ ವರದಿ ಕೇಳಿದ್ದೇನೆಂದು  ಪೊಲೀಸ್ ವರಿಷ್ಠಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ವರದಿ ಬಂದ ಬಳಿಕ  ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಹಿಂದೂ ಯುವವಾಹಿನಿಯ ರಾಜ್ಯ ನಾಯಕ ನಾಗೇಂದ್ರ ಪ್ರತಾಪ್ ಸಿಂಗ್, ಸಂಘಟನೆಯಿಂದ ವಜಾಗೊಳಿಸಲ್ಪಟ್ಟಿರುವ ಜಿಲ್ಲಾ ನಾಯಕನ ಕುಕೃತ್ಯವಾಗಿದ್ದು, ಸಂಘಟನೆ ಹೆಸರಿಗೆ ಮಸಿ ಬಳಿಯಲು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

click me!