ರೀ ಬೇಕಾದ್ರೆ ಮೋದಿ ಹೆಸರು ಚೇಂಜ್ ಮಾಡಿ: ಕೇಜ್ರಿ!

By Web DeskFirst Published Aug 25, 2018, 5:17 PM IST
Highlights

ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು! ಬಿಜೆಪಿ ವಿರುದ್ಧ ಹರಿಹಾಯ್ದ ದೆಹಲಿ ಸಿಎಂ! ಪ್ರಧಾನಿ ಮೋದಿ ಹೆಸರು ಬದಲಿಸಲು ಸಲಹೆ! ಮೋದಿ ವಿರುದ್ಧ ಗುಡುಗಿದ ಅರವಿಂದ್ ಕೇಜ್ರಿವಾಲ್! ಹೆಸರು ಬದಲಾವಣೆ ಪ್ರಸ್ತಾವನೆ ಇಲ್ಲ ಎಂದ ಬಿಜೆಪಿ

ನವದೆಹಲಿ(ಆ.25): ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರು ಪ್ರಸ್ತಾವಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಕುರಿತು ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ  ವಾಗ್ದಾಳಿ ನಡೆಸಿದ್ದು, ಬೇಕಾದರೆ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಿ ರಾಮಲೀಲಾ ಮೈದಾನದ ಹೆಸರನ್ನಲ್ಲ ಎಂದು ಹರಿಹಾಯ್ದಿದ್ದಾರೆ.

रामलीला मैदान इत्यादि के नाम बदलकर अटल जी के नाम पर रखने से वोट नहीं मिलेंगे

भाजपा को प्रधान मंत्री जी का नाम बदल देना चाहिए। तब शायद कुछ वोट मिल जायें। क्योंकि अब उनके अपने नाम पर तो लोग वोट नहीं दे रहे। https://t.co/156uKuTQ7V

— Arvind Kejriwal (@ArvindKejriwal)

ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು ಇಡುವುದರಿಂದ ಬಿಜೆಪಿಗೆ ಮತ ಬರುತ್ತದೆ ಎಂದು ಮೋದಿ ನಂಬಿದ್ದರೆ ಅದು ಅವರ ಮೂರ್ಖತನ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ಇದೇ ವೇಳೆ ರಾಮಲೀಲಾ ಮೈದಾನಕ್ಕೆ ಅಟಲ್ ಹೆಸರು ಇಡುವ ಯಾವುದೇ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸ್ಪಷ್ಟನೆ ನೀಡಿದೆ. ಹೆಸರು ಬದಲಾವಣೆ ಪ್ರಸ್ತಾವ ಕುರಿತ ವರದಿಯನ್ನು ತಳ್ಳಿಹಾಕಿರುವ  ಉತ್ತರ ದೆಹಲಿ ಮೇಯರ್ ಅದೇಶ್ ಗುಪ್ತಾ , ಇಂತಹ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

कुछ लोग जानबूझकर भ्रम फैलाने की कोशिश कर रहे हैं! मर्यादा पुरुषोत्तम भगवान राम हम सबके आराध्य हैं इसलिये रामलीला मैदान का नाम बदलने का कोई सवाल ही नहीं है! pic.twitter.com/xJ7XrSIutO

— Manoj Tiwari (@ManojTiwariMP)

ಇನ್ನು ರಾಮಲೀಲಾ ಮೈದಾನದ ಹೆಸರು ಬದಲಾಯಿಸುವ ಯಾವುದೇ ಪ್ರಸ್ತಾವನೆ ಪಕ್ಷದಲ್ಲಿ ಇಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಕೂಡಾ ಹೇಳಿದ್ದಾರೆ. ರಾಮನನ್ನು ನಾವು ಪೂಜಿಸುತ್ತೇವೆ. ಕೆಲ ಜನರು ರಾಜಕೀಯ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡುವ ವದಂತಿ ಹಬ್ಬಿದ್ದಾರೆ  ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.

click me!