ಚಕ್ರವರ್ತಿ ಸೂಲಿಬೆಲೆ, ಮಾಳವಿಕಾಗೆ ಬಿಜೆಪಿ ಟಿಕೆಟ್?

Published : May 01, 2017, 03:12 AM ISTUpdated : Apr 11, 2018, 12:55 PM IST
ಚಕ್ರವರ್ತಿ ಸೂಲಿಬೆಲೆ, ಮಾಳವಿಕಾಗೆ ಬಿಜೆಪಿ ಟಿಕೆಟ್?

ಸಾರಾಂಶ

ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೂ ನಿರ್ಣಾ ಯಕ​ರಾಗಿದ್ದಾರೆ. ರಾಮದಾಸ್‌ ಅವರೂ ಅದೇ ಸಮುದಾ​ಯದವರು. ಈಗ ಅವರ ಬದಲು ಅದೇ ಸಮು​ದಾಯದ ಜನಪ್ರಿಯ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಮಾತು ಕೇಳಿಬರುತ್ತಿದೆ. ಆ ಜನಪ್ರಿಯ ವ್ಯಕ್ತಿ ಮಾಳ​ವಿಕ ಅವಿನಾಶ್‌ ಆಗಬಹುದು. ಈಗಾಗಲೇ ಪಕ್ಷದ ನಾಯ​ಕರು ಈ ಬಗ್ಗೆ ಮಾಳವಿಕ ಅವರಿಗೆ ಸುಳಿವು ನೀಡಿ​ದ್ದಾರೆ ಎನ್ನಲಾಗಿದೆ.

ಬೆಂಗಳೂರು(ಮೇ 01): ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಾಧ್ಯವಾದಷ್ಟುಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಗಂಭೀರ ಚಿಂತನೆ ನಡೆಯುತ್ತಿದೆ. ಇತ್ತೀಚಿನ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳ ಚುನಾವಣೆ ಯಲ್ಲಿ ಅನುಸರಿಸಿದ ತಂತ್ರ ಅನುಷ್ಠಾನ ಗೊಳಿಸುವ ಬಗ್ಗೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಅದಕ್ಕಾಗಿ ಪ್ರಯತ್ನಗಳೂ ಆರಂಭವಾಗಿವೆ.

ಈ ನಿಟ್ಟಿನಲ್ಲಿ ಚಿತ್ರ ನಟಿ ಹಾಗೂ ಪಕ್ಷದ ಸಹ ವಕ್ತಾರರಾಗಿರುವ ಮಾಳವಿಕ ಅವಿನಾಶ್‌ ಅವರನ್ನು ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಅದೇ ರೀತಿ ಹಿಂದುತ್ವದ ಪ್ರಬಲ ಪ್ರತಿಪಾದಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಉತ್ತರ ಕನ್ನಡದ ಕರಾವಳಿ ಭಾಗದ ಕ್ಷೇತ್ರವೊಂದರಿಂದ ಕಣಕ್ಕಿಳಿಸುವ ಚಿಂತನೆ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಮಾಳವಿಕಾ ಅವಿನಾಶ್‌ ಅವರಿಗೆ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂಬ ಪ್ರಯತ್ನದ ಹಿಂದೆ ಲೆಕ್ಕಾಚಾರವೂ ಅಡಗಿದೆ. ಆ ಕ್ಷೇತ್ರದಲ್ಲಿ ಹಿಂದೆ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲನ್ನಪ್ಪಿದರು. ರಾಮದಾಸ್‌ ಅವರಿಗೆ ಅಂಟಿಕೊಂಡಿರುವ ಮಹಿಳೆ​ಯೊಬ್ಬರ ಜತೆಗಿನ ಒಡನಾಟದ ಆಪಾದನೆ ಕಾರಣದಿಂದ ಮುಂದಿನ ಚುನಾವಣೆಯಲ್ಲೂ ಅವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲುವುದು ಕಷ್ಟವಾಗಬಹುದು ಎಂಬ ಆತಂಕ ಪಕ್ಷದ ನಾಯಕರಲ್ಲಿದೆ. ಹೀಗಾಗಿ ಅವರ ಬದಲು ಬೇರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಒಲವು ವ್ಯಕ್ತ ವಾಗಿದೆ. ಆ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೂ ನಿರ್ಣಾ ಯಕ​ರಾಗಿದ್ದಾರೆ. ರಾಮದಾಸ್‌ ಅವರೂ ಅದೇ ಸಮುದಾ​ಯದವರು. ಈಗ ಅವರ ಬದಲು ಅದೇ ಸಮು​ದಾಯದ ಜನಪ್ರಿಯ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಮಾತು ಕೇಳಿಬರುತ್ತಿದೆ. ಆ ಜನಪ್ರಿಯ ವ್ಯಕ್ತಿ ಮಾಳ​ವಿಕ ಅವಿನಾಶ್‌ ಆಗಬಹುದು. ಈಗಾಗಲೇ ಪಕ್ಷದ ನಾಯ​ಕರು ಈ ಬಗ್ಗೆ ಮಾಳವಿಕ ಅವರಿಗೆ ಸುಳಿವು ನೀಡಿ​ದ್ದಾರೆ ಎನ್ನಲಾಗಿದೆ.

ಇನ್ನು, ಚಕ್ರವರ್ತಿ ಸೂಲಿಬೆಲೆ ಸಂಘ ಪರಿವಾರದ ಅಚ್ಚುಮೆಚ್ಚಿನ ವ್ಯಕ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ ಸಿಂಹ ಅಚ್ಚರಿಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಆಗ ಚಕ್ರವರ್ತಿ ಅವರು ನಿರಾಕರಿಸಿದ್ದರು ಎನ್ನಲಾ​ಗಿದೆ. ಇದೀಗ ವಿಧಾನಸಭಾ ಚುನಾವಣೆ​ಯಲ್ಲಿ ಉತ್ತರ ಕನ್ನಡದ ಕರಾವಳಿ ಕ್ಷೇತ್ರ​ವೊಂದರಿಂದ ಸ್ಪರ್ಧೆಗಿಳಿಸುವ ಪ್ರಯತ್ನಒಂದು ವಲಯದಿಂದ ನಡೆದಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ