ಯೂಟ್ಯೂಬ್ ನೋಡಿ ಸರಗಳ್ಳತನ ಕಲಿತರು..!

By Suvarna Web DeskFirst Published Jan 20, 2018, 10:57 AM IST
Highlights

ಹಲವು ದಿನಗಳಿಂದ ಇಮ್ರಾನ್ ಹಾಗೂ ಅಬ್ದುಲ್ ಸ್ನೇಹಿತರಾಗಿದ್ದು, ಪ್ರಾಥಮಿಕ ತರಗತಿಗೆ ಅವರಿಬ್ಬರು ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಇತ್ತೀಚಿಗೆ ಕೆಲಸವಿಲ್ಲದೆ ಅಲೆಯುತ್ತಿದ್ದ ಅವರು, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ಮಾರ್ಗ ತುಳಿದಿದ್ದಾರೆ. ಆಗ ಯೂಟ್ಯೂಬ್‌ನಲ್ಲಿ ಕಳ್ಳತನವನ್ನು ಕಲಿತ ಆರೋಪಿಗಳು, ನಂತರ ಸರಗಳ್ಳತನಕ್ಕಿಳಿದಿದ್ದಾರೆ.

ಬೆಂಗಳೂರು(ಜ.20): ಮೋಜು-ಮಸ್ತಿಗೆ ಹಣ ಸಂಪಾದಿಸಲು ‘ಯೂಟ್ಯೂಬ್’ ನೋಡಿ ಸರಗಳ್ಳತನ ಎಸಗುತ್ತಿದ್ದ ಇಬ್ಬರು ಕಿಡಿಗೇಡಿಗಳು ಗಿರಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬನಶಂಕರಿ ಇಮ್ರಾನ್ ಪಾಷಾ, ಅಬ್ದುಲ್ ಬಂಧಿತರಾಗಿದ್ದು, ಆರೋಪಿಗಳಿಂದ ಸುಮಾರು ಅರ್ಧ ಕೆ.ಜಿ.ಯಷ್ಟು ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಹಲವು ದಿನಗಳಿಂದ ಇಮ್ರಾನ್ ಹಾಗೂ ಅಬ್ದುಲ್ ಸ್ನೇಹಿತರಾಗಿದ್ದು, ಪ್ರಾಥಮಿಕ ತರಗತಿಗೆ ಅವರಿಬ್ಬರು ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಇತ್ತೀಚಿಗೆ ಕೆಲಸವಿಲ್ಲದೆ ಅಲೆಯುತ್ತಿದ್ದ ಅವರು, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ಮಾರ್ಗ ತುಳಿದಿದ್ದಾರೆ. ಆಗ ಯೂಟ್ಯೂಬ್‌ನಲ್ಲಿ ಕಳ್ಳತನವನ್ನು ಕಲಿತ ಆರೋಪಿಗಳು, ನಂತರ ಸರಗಳ್ಳತನಕ್ಕಿಳಿದಿದ್ದಾರೆ.

ಉದ್ಯಾನಕ್ಕೆ ಮುಂಜಾನೆ ಹಾಗೂ ಮುಸ್ಸಂಜೆ ವಾಯು ವಿಹಾರಕ್ಕೆ ತೆರಳುವ ಹಾಗೂ ರಸ್ತೆಯಲ್ಲಿ ಏಕಾಂಗಿಯಾಗಿ ಸಂಚರಿಸುವ ಮಹಿಳೆಯರನ್ನು ಗುರಿಯಾಗಿಸಿ ಕೃತ್ಯ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಕೆಲ ದಿನಗಳ ಹಿಂದೆ ಬಾತ್ಮೀದಾರರರ ಮೂಲಕ ಆರೋಪಿಗಳ ಕುರಿತು ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಳಿದ ಪೊಲೀಸರು, ಗಿರಿನಗರ ಬಳಿ ಬೈಕ್‌'ನಲ್ಲಿ ತೆರಳುವಾಗ ಅಡ್ಡಗಟ್ಟಿದ್ದರು. ನಂತರ ಠಾಣೆಗೆ ಕರೆ ತಂದು ತೀವ್ರವಾಗಿ ಪ್ರಶ್ನಿಸಿದಾಗ ಸರಗಳ್ಳತನ ಕೃತ್ಯವನ್ನು ತಪ್ಪೊಪ್ಪಿಕೊಂಡರು ಎಂದು ಮೂಲಗಳು ವಿವರಿಸಿವೆ. ಗಿರಿನಗರ, ಬನಶಂಕರಿ, ಜಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ನಡೆದಿದ್ದ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

click me!