
ದಾವಣಗೆರೆ(ಆ.23): ದಾವಣಗೆರೆ ಜಿಲ್ಲೆಯನ್ನ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಮಾಡಬೇಕು ಅನ್ನೋದು ಸಿಇಒ ಎಸ್. ಅಶ್ವತಿ ಮೇಡಂ ಕನಸು. ಇದಕ್ಕಾಗಿ ಸಿಕ್ಕಾಪಟ್ಟೆ ಪ್ರಯತ್ನ ಮಾಡ್ತಿದ್ದಾರೆ.. ಇದೇ ದಿಸೆಯಲ್ಲಿ ಇನ್ನೂ ಒಂದ್ ಹೆಜ್ಜೆ ಮುಂದಿಟ್ಟಿದ್ದಾರೆ. ಶಾಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದಾರೆ. ಅದುವೇ ಸೀಮಂತ ಸಮಾರಂಭ.
ಕಳೆದ ಒಂದು ವಾರದ ಹಿಂದೆಯಷ್ಟೇ ಕೈದಾಳೆ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿಕೊಂಡ ಇಬ್ಬರು ಗರ್ಭಿಣಿಯರಿಗೆ ಜಿಲ್ಲಾಪಂಚಾಯತ್ನಿಂದ ವಿಶೇಷ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಜಿಲ್ಲೆಯ 6 ತಾಲೂಕುಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡ 249 ಗರ್ಭಿಣಿಯರಿಗೆ ಸೀಮಂತ ಸಮಾರಂಭ ಆಯೋಜಿಸಿದೆ. ಇದಕ್ಕೆ ಬೇಕಾದ ಸೀರೆ, ಗಾಜಿನ ಬಳೆ ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನ ಸ್ವತಃ ಸಿಇಒ ಅಶ್ವತಿಯವರೇ ಮುಂದೆ ನಿಂತು ಖರೀದಿ ಮಾಡಿದ್ದಾರೆ. ಸರ್ಕಾರಿ ಸಮುದಾಯಭವನದಲ್ಲಿ ಇಂದು ಇಂದು ಸಂಪ್ರದಾಯ ಬದ್ಧವಾಗಿ ಸೀಮಂತ ಕಾರ್ಯ ನಡೆಯಲಿದೆ.
ಶೌಚಾಲಯ ನಿರ್ಮಿಸಿಕೊಂಡ ಬಾಣಂತಿಯರಿಗೂ ಸನ್ಮಾನಿಸಲಾಗುತ್ತಿದೆ.. ಮನೆಯಲ್ಲಿ ಶೌಚಾಲಯ ಬೇಕೇ ಬೇಕು ಎಂದು ಪಟ್ಟು ಹಿಡಿದ 176 ಶಾಲಾ ವಿದ್ಯಾರ್ಥಿಳಿಗೂ ಗೌರವಿಸಿಲಾಗುತ್ತಿದೆ.
ಒಟ್ಟಿನಲ್ಲಿ ಇಡೀ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಂಆಡೋ ಕನಸು ಕಂಡ ಸಿಇಓ ಅವರು ಏನೆಲ್ಲ ಕಸರತ್ತು ಮಾಡ್ತಿದ್ದಾರೆ. ಆದಷ್ಟು ಬೇಗ ಇವರಿಗೆ ಯಶಸ್ಸು ಸಿಗಲಿ.. ಜನರು ಇವಳ ಕಳಕಳಿ ಹಾಗೂ ಕಾಳಜಿಗೆ ಸ್ಪಂದಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.