ಚೀನಾ ‘ಸುರಕ್ಷತಾ ಸಲಹೆ'ಗೆ ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ: ಬಿಜೆಪಿ

By Suvarna Web DeskFirst Published Jul 9, 2017, 1:11 PM IST
Highlights

ಭಾರತದಲ್ಲಿ ವಾಸವಾಗಿರುವ ಹಾಗೂ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ 'ಸುರಕ್ಷತಾ ಸಲಹೆ'ಗಳನ್ನು ನೀಡಿರುವ ಕ್ರಮವನ್ನು ರಾಜತಾಂತ್ರಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ಬೆಂಗಳೂರು (ಜು.09): ಭಾರತದಲ್ಲಿ ವಾಸವಾಗಿರುವ ಹಾಗೂ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ 'ಸುರಕ್ಷತಾ ಸಲಹೆ'ಗಳನ್ನು ನೀಡಿರುವ ಕ್ರಮವನ್ನು ರಾಜತಾಂತ್ರಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ಸಿಕ್ಕಿಂ ಬಳಿ ರಸ್ತೆ ನಿರ್ಮಾಣಕ್ಕೆ ಚೀನಾ ಮುಂದಾಗಿರುವ ಹಿನ್ನಲೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಭಾರತದಲ್ಲಿ ವಾಸವಾಗಿರುವ ಹಾಗೂ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ಚೀನಾ ಸುರಕ್ಷತಾ ಸೂಚನೆಗಳನ್ನು ಜಾರಿಗೊಳಿಸಿತ್ತು.

ಚೀನಾ ಕ್ರಮವನ್ನು ಸರ್ಕಾರ ರಾಜತಾಂತ್ರಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳವುದು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು. ಇಂಡಿಯಾ ಫೌಂಡೇಶನ್ ನಿಯೋಗವು ಚೀನಾಗೆ ತೆರಳಲಿದೆ ಎಂದು ರಾಮ್ ಮಾಧವ್ ಹೇಳಿದ್ದಾರೆ.

click me!