56 ಪಾಕಿಸ್ತಾನಿ ಕೈದಿಗಳಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಭಾಗ್ಯ

By Suvarna Web DeskFirst Published Mar 16, 2018, 8:31 PM IST
Highlights
  • ಭಾರತೀಯ ಜೈಲುಗಳಲ್ಲಿರುವ 56 ಮಂದಿ ಪಾಕಿಸ್ತಾನಿ ಕೈದಿಗಳ ವಿರುದ್ಧ ಯಾವುದೇ ಕೇಸುಗಳಿಲ್ಲ
  • ಮಾನವೀಯತೆಯ ನೆಲೆಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳನ್ನು ಬಿಡುಗಡೆಗೊಳಿಸುವ ಭಾರತದ ಪ್ರಸ್ತಾವನೆ

ನವದೆಹಲಿ: ಭಾರತವು 56 ಪಾಕಿಸ್ತಾನಿ ಕೈದಿಗಳನ್ನು ಬಿಡುಗಡೆಮಾಡಲು ಬಯಸುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಭಾರತೀಯ ಜೈಲುಗಳಲ್ಲಿರುವ 56 ಮಂದಿ ಪಾಕಿಸ್ತಾನಿ ಕೈದಿಗಳ ವಿರುದ್ಧ ಯಾವುದೇ ಕೇಸುಗಳಿಲ್ಲ. ಆದುದರಿಂದ ಅವರನ್ನು ಬಿಡುಗಡೆ ಮಾಡಿ ವಾಪಾಸು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ, ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡಾವಿಟ್’ನಲ್ಲಿ ತಿಳಿಸಿದೆ.

ಮಾನವೀಯತೆಯ ನೆಲೆಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳನ್ನು ಬಿಡುಗಡೆಗೊಳಿಸುವ ಭಾರತದ ಪ್ರಸ್ತಾವನೆಯನ್ನು ಕಳೆದ ಮಾ.7 ರಂದು ಪಾಕಿಸ್ತಾನವು ಒಪ್ಪಿಕೊಂಡಿತ್ತು.

ಈ ಪ್ರಸ್ತಾವನೆಯನ್ನು 18 ವರ್ಷಕ್ಕಿಂತ ಕೆಳಪಟ್ಟ ಬಾಲಕೈದಿಗಳು ಹಾಗೂ  60 ವರ್ಷ ವಯಸ್ಸು ಮೇಲ್ಪಟ್ಟ ಕೈದಿಗಳಿಗೂ ವಿಸ್ತರಿಸಬೇಕೆಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಸಲಹೆ ನೀಡಿದ್ದರು ಎಂದು ವರದಿಗಳು ಹೇಳಿತ್ತು.

click me!