312 ಸಿಖ್ ವಿದೇಶಿಯರು ಕಪ್ಪುಪಟ್ಟಿಯಿಂದ ಹೊರಕ್ಕೆ: ಇಬ್ಬರು ಉಳಿದಿದ್ದೇಕೆ?

By Web DeskFirst Published Sep 13, 2019, 3:49 PM IST
Highlights

312 ಸಿಖ್ ವಿದೇಶಿಯರನ್ನು ಕಪ್ಪುಪಟ್ಟಿಯಿಂದ ಹೊರಗಿಟ್ಟ ಕೇಂದ್ರ ಸರ್ಕಾರ| ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಖ್ ವಿದೇಶಿಯರು| ಕಪ್ಪುಪಟ್ಟಿಯಿಂದ 312 ಜನರನ್ನು ಹೆಸರನ್ನು ಕೈಬಿಟ್ಟ ಕೇಂದ್ರ ಸರ್ಕಾರ| ಭಾರತೀಯ ವೀಸಾ ಪಡೆಯಲು ಅರ್ಹರಾದ 312 ವಿದೇಶಿ ಸಿಖ್‌ರು| ಪ್ರತ್ಯೇಕ ಖಲಿಸ್ತಾನ್ ಚಳವಳಿ ಸಮಯದಲ್ಲಿಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದ 312 ಸಿಖ್‌ರು| ಕಪ್ಪು ಪಟ್ಟಿಯಿಂದ ಹೊರಗಿಟ್ಟ ಕುರಿತು ಕೇಂದ್ರ ಗೃಹ ಸಚಿವಾಲಯ ಮಾಹಿತಿ|

ನವದೆಹಲಿ(ಸೆ.13): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಖ್ ವಿದೇಶಿಯರ ಕಪ್ಪುಪಟ್ಟಿಯಿಂದ 312 ಜನರನ್ನು ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. 

ಕಪ್ಪು ಪಟ್ಟಿಯಿಂದ ಹೊರಬಿದ್ದಿರುವ ಈ 312 ಜನ ವಿದೇಶಿಯರು ಇನ್ನು ಮುಂದೆ ಭಾರತೀಯ ವೀಸಾ ಪಡೆಯಲು ಮತ್ತು ಸಾಗರೋತ್ತರ ಭಾರತೀಯ ಕಾರ್ಡನ್ನು ಪಡೆಯಲು ಅರ್ಹರಾಗಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಇದೀಗ ಇಬ್ಬರು ಮಾತ್ರ ಉಳಿದಿರುವುದು ವಿಶೇಷ.

ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವಾಲಯ, ಎಲ್ಲಾ ವಿದೇಶಿ ಧರ್ಮ ಪ್ರಚಾರ ಕೇಂದ್ರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ 312 ಜನರಿಗೆ ಭಾರತದಲ್ಲಿರುವ ತಮ್ಮ ಕುಟುಂಬ ವರ್ಗವನ್ನ ಉಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

1980ರ ದಶಕದಲ್ಲಿ ಪ್ರತ್ಯೇಕ ಖಲಿಸ್ತಾನ್ ಚಳವಳಿ ತೀವ್ರವಾಗಿದ್ದ ಸಮಯದಲ್ಲಿ, ಸಿಖ್ ಸಮುದಾಯಕ್ಕೆ ಸೇರಿದ ಕೆಲವರು ಭಾರತದಲ್ಲಿ ಮತ್ತು ವಿದೇಶದಲ್ಲಿ ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದರು. ಅಂತವರನ್ನು 2016 ರವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.

ಇದೀಗ 312 ಜನರನ್ನು ಕಪ್ಪುಪಟ್ಟಿಯಿಂದ ತೆಗೆದು ಹಾಕಿರುವುದರಿಂದ ಇವರೆಲ್ಲಾ ಭಾರತೀಯ ವೀಸಾ ಪಡೆದು ಇಲ್ಲಿ ದೀರ್ಘ ಸಮಯ ನೆಲೆಸಬಹುದಾಗಿದೆ. ಅಲ್ಲದೆ ಸಾಗರೋತ್ತರ ಭಾರತೀಯ ನಾಗರಿಕರ ಗುರುತು ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವೀಸಾ ಮೂಲಕ ಭಾರತದಲ್ಲಿ ಎರಡು ವರ್ಷಗಳವರೆಗೆ ನೆಲೆಸುವ ಅವಕಾಶ ಪಡೆದಿದ್ದಾರೆ.

click me!