ಸಣ್ಣ ಉಳಿತಾಯಗಾರರಿಗೆ ಕೇಂದ್ರ ಸರ್ಕಾರದ ಶಾಕ್

By Suvarna Web DeskFirst Published Dec 28, 2017, 7:45 AM IST
Highlights

ಎನ್‌ಸ್‌ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಶೇ.0.2ರಷ್ಟು ಇಳಿಸಿದೆ. ಜನವರಿ- ಮಾರ್ಚ್ ತ್ರೈಮಾಸಿಕದ ಅವಧಿಗೆ ಬಡ್ಡಿದರಗಳನ್ನು ಇಳಿಕೆ ಮಾಡಲಾಗಿದ್ದು, ಇದರಿಂದ ಬ್ಯಾಂಕ್‌ಗಳು ಕೂಡ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.

ನವದೆಹಲಿ (ಡಿ.28): ಎನ್‌ಸ್‌ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಶೇ.0.2ರಷ್ಟು ಇಳಿಸಿದೆ. ಜನವರಿ- ಮಾರ್ಚ್ ತ್ರೈಮಾಸಿಕದ ಅವಧಿಗೆ ಬಡ್ಡಿದರಗಳನ್ನು ಇಳಿಕೆ ಮಾಡಲಾಗಿದ್ದು, ಇದರಿಂದ ಬ್ಯಾಂಕ್‌ಗಳು ಕೂಡ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.

ಇದೇ ವೇಳೆ ಹಿರಿಯ ನಾಗರಿಕರ ಐದು ವರ್ಷಗಳ ಉಳಿತಾಯ ಯೋಜನೆ ಮೇಲಿನ ಬಡ್ಡಿದರ ಶೇ.8.3ರಲ್ಲಿಯೇ ಮುಂದುವರಿಯಲಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಖಾತೆ, ಕಿಸಾನ್ ವಿಕಾಸ್ ಪತ್ರ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)ಗಳ ಮೇಲಿನ ಬಡ್ಡಿದರಗಳನ್ನು 0.2ರಷ್ಟು ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಹೀಗಾಗಿ ಪಿಪಿಎಫ್ ಮತ್ತು ಎನ್‌ಎಸ್‌ಸಿ ಯೋಜನೆಗಳ ವಾರ್ಷಿಕ ಬಡ್ಡಿದರ ಶೇ. 7.6ಕ್ಕೆ ಇಳಿಕೆಯಾಗಲಿದೆ. ಇನ್ನು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿದರ ಶೇ.7.3ಕ್ಕೆ ಹಾಗೂ ಸುಕನ್ಯಾ ಸಮೃದ್ಧಿ ಖಾತೆ ಬಡ್ಡಿದರ ಶೇ.8.3ರಿಂದ ಶೇ.8.1ಕ್ಕೆ ಇಳಿಯಲಿದೆ. 1ರಿಂದ 5 ವರ್ಷಗಳ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಶೇ.6.6 ರಿಂದ 7.4ರಷ್ಟು ಇರಲಿದೆ. ಮರಳಿಸುವ ಠೇವಣಿ (ಆರ್.ಡಿ.) ಶೇ.6.9ಕ್ಕೆ ಇಳಿಕೆಯಾಗಲಿದೆ.

ತ್ರೈಮಾಸಿಕ ಅವಧಿ ಆಧಾರದ ಮೇಲೆ ಸರ್ಕಾರ ಸಣ್ಣ ಉಳಿತಾಯ ಖಾತೆಗಳಿಗೆ ಬಡ್ಡಿದರ ಪ್ರಕಟಿಸಿದೆ ಎಂದು ಅಧಿಸೂಚನೆ ತಿಳಿಸಿದೆ.

click me!