
ನವದೆಹಲಿ: 2014ರ ಲೋಕಸಭೆ ಚುನಾವಣೆಯ ಪ್ರಣಾಳಿಕೆ ವೇಳೆ ನೀಡಲಾದ ಬಾಕಿ ಭರವಸೆಗಳನ್ನು ಈಡೇರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಅದಕ್ಕೆಂದೇ ಇನ್ನು 20 ದಿನದಲ್ಲಿ ಮಂಡನೆಯಾಗಲಿರುವ ಮುಂಗಡಪತ್ರದಲ್ಲಿ ಬಾಕಿ ಉಳಿದಿರುವ ಭರವಸೆಗಳು ಈಡೇರುವ ನಿರೀಕ್ಷೆಯಿದೆ.
ಯಾವ ಭರವಸೆಗಳು ಈಡೇರದೇ ಬಾಕಿ ಉಳಿದಿವೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಲು ಪ್ರಧಾನಮಂತ್ರಿಗಳು ಎಲ್ಲ ಸಚಿವಾಲಯಗಳಿಗೆ ಸೂಚಿಸಿದ್ದಾರೆ. ಈ ಪ್ರಕಾರ, ಅಂಗವಿಕಲರನ್ನು ಪೋಷಿಸುವ ಕುಟುಂಬಗಳಿಗೆ ಹೆಚ್ಚಿನ ತೆರಿಗೆ ವಿನಾಯ್ತಿ ನೀಡುವ ಭರವಸೆಯನ್ನು 2014ರಲ್ಲಿ ಬಿಜೆಪಿ ನೀಡಿತ್ತು.
ಈಗ ಈ ಬೇಡಿಕೆಯನ್ನು ಈಡೇರಿಸಬೇಕು. ಮುಂಗಡ ಪತ್ರದಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಸಾಮಾ ಜಿಕ ನ್ಯಾಯ ಸಚಿವಾಲಯವು ವಿತ್ತ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಈಗ ಆದಾಯ ತೆರಿಗೆ ಇಲಾಖೆಯು ಅಂಗವಿಕಲರನ್ನು ನೋಡಿ ಕೊಳ್ಳುವ ಕುಟುಂಬಕ್ಕೆ ಕೆಲ ಮಟ್ಟಿನ ತೆರಿಗೆ ವಿನಾಯ್ತಿ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.