3 ವರ್ಷದಲ್ಲಿ 71,941 ಕೋಟಿ ರೂ ಕಪ್ಪು ಹಣ ಪತ್ತೆ; ಕೇಂದ್ರದಿಂದ ಸುಪ್ರೀಂಗೆ ಮಾಹಿತಿ

By Suvarna Web Desk  |  First Published Jul 23, 2017, 4:15 PM IST

ಕಳೆದ ಮೂರು ವರ್ಷದಲ್ಲಿ 71,941 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ ಹಚ್ಚಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ನೀಡಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಆದಾಯ ತೆರಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 71,941 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.


ನವದೆಹಲಿ( ಜು.23): ಕಳೆದ ಮೂರು ವರ್ಷದಲ್ಲಿ 71,941 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ ಹಚ್ಚಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ನೀಡಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಆದಾಯ ತೆರಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 71,941 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

2014 ರ ಏಪ್ರಿಲ್ 1 ರಿಂದ 2017 ರ ಫೆಬ್ರವರಿ 28 ರವರೆಗೂ 71,941 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ ಮಾಡಲಾಗಿದೆ. ಇದರಲ್ಲಿ ಸಾವಿರ ಹಾಗೂ 500 ನೋಟುಗಳ ಬ್ಯಾನ್‌ ಬಳಿಕ ಅಂದ್ರೆ 2016ರ ನವೆಂಬರ್‌ 9ರಿಂದ 2017ರ ಜನವರಿ 10ರವೆರಗೂ 5,400 ಕೋಟಿ ರೂ. ನಗದು ಪತ್ತೆಯಾಗಿದೆ. ಹಾಗೂ 303.367 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಇದೇ ಅವಧಿಯಲ್ಲಿ 15,000 ಕಾರ್ಯಾಚರಣೆಗಳನ್ನು ಐಟಿ ಇಲಾಖೆ ನಡೆಸಿದ್ದು, 33,000 ಕೋಟಿ ರೂಪಾಯಿಗೂ ಅಧಿಕ ಅಘೋಷಿತ ತೆರಿಗೆಯನ್ನು ಪತ್ತೆ ಮಾಡಲಾಗಿದೆ ಅಂತ ಸರ್ಕಾರ ಸುಪ್ರೀಂಗೆ ತಿಳಿಸಿದೆ. ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನೋಟು ಬ್ಯಾನ್‌ ಬಳಿಕ ಐಟಿ ನಡೆಸಿದ ಕಾರ್ಯಾಚರಣೆಗಳ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಚೆಲ್ಲಿದೆ. ನೋಟು ಬ್ಯಾನ್‌ ನಂತರ ಐಟಿ ಇಲಾಖೆ 1,100 ಸರ್ಚ್‌ ಆಪರೇಷನ್‌, ಸರ್ವೆಗಳು ಹಾಗೂ 5,100ಕ್ಕೂ ಹೆಚ್ಚು ಕಡೆ ಪರಿಶೀಲನೆ ನಡೆಸಿದೆ. ಈ ವೇಳೆ 513 ಕೋಟಿ ನಗದು ಸೇರಿ 610 ಕೋಟಿ ಆಸ್ತಿ-ಪಾಸ್ತಿ ಜಪ್ತಿ ಮಾಡಲಾಗಿದೆ. ಇದರಲ್ಲಿ 110 ಕೋಟಿಗೂ ಹೆಚ್ಚು ಹೊಸ ನೋಟುಗಳು ಸೇರಿವೆ. ಒಟ್ಟಾರೆ 5,400 ಕೋಟಿಗೂ ಅಧಿಕ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. 

Latest Videos

click me!