
ನವದೆಹಲಿ (ಮಾ. 09): ದರ ನಿಯಂತ್ರಣ ಪಟ್ಟಿಗೆ ಒಳಪಡದ 390 ಕ್ಯಾನ್ಸರ್ ಔಷಧಗಳ ಗರಿಷ್ಠ ಮಾರಾಟ ದರವನ್ನು ಶೇ.87ರ ವರೆಗೂ ಇಳಿಕೆ ಮಾಡಲಾಗಿದೆ.
ಇದರಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕ 800 ಕೋಟಿ ರು. ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಫೆ.27ರಂದು ದರ ನಿಯಂತ್ರಣಕ್ಕೆ ಒಳಪಡದ 42 ಕ್ಯಾನ್ಸರ್ ಔಷಧಗಳನ್ನು ದರ ನಿಯಂತ್ರಣಕ್ಕೆ ಒಳಪಡಿಸಿ, ವ್ಯಾಪಾರ ಅಂತರ ಶೇ.30ಕ್ಕೆ ಮಿತಿಗೊಳಿಸಿತ್ತು.
ಪರಿಷ್ಕೃತ ದರ ಮಾ.8ರಿಂದ ಜಾರಿಯಾಗಿದೆ. ಒಟ್ಟಾರೆಯಾಗಿ ಕ್ಯಾನ್ಸರ್ ನಿವಾರಕ 426 ಔಷಧಗಳ ಪೈಕಿ ಶೇ.91ರಷ್ಟುಅಂದರೆ 390 ಔಷಧಗಳ ದರ ಇಳಿಕೆ ಯಾಗಿದ್ದು, 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಅಲ್ಲದೇ ವಾರ್ಷಿಕವಾಗಿ ಕ್ಯಾನ್ಸರ್ ರೋಗಿಗಳಿಗೆ 800 ಕೋಟಿ ರು. ಉಳಿತಾಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.