
ನವದೆಹಲಿ: ನನ್ನ ಬಜೆಟ್ ಚುನಾವಣಾ ಪ್ರಣೀತವಾಗಿರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು ಬಜೆಟ್’ನಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅದನ್ನು ಬಿಟ್ಟು ಚುನಾವಣಾ ಪ್ರಣೀತವಾಗಿ ಹಾಗೂ ಜನಪ್ರಿಯತೆಗೆಂದು ಬಜೆಟ್ ಮಂಡಿಸಲಾಗದು ಎಂದು ಹೇಳಿದರು.
ದೇಶವು ಹಿಂದುಳಿದ 5 ದೇಶಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು. ಇಂಥ ದೇಶವನ್ನು ಈಗ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಲಾಗುತ್ತಿದೆ. ಜನ ಸಾಮಾನ್ಯರು ಬರೀ ಪುಕ್ಕಟೆ ಹಾಗೂ ಜನಪ್ರಿಯ ಕೊಡುಗೆ ಬಯಸುತ್ತಾರೆ ಎಂಬುದು ಭ್ರಮೆ. ಅವರಿಗೆ ಪ್ರಾಮಾಣಿಕತೆ ಬೇಕು ಎಂದು ಅಭಿಪ್ರಾಯ ಪಟ್ಟರು. ಆದರೆ ಕೃಷಿ ಕ್ಷೇತ್ರ ಹಿಂದುಳಿದಿದೆ ಎಂದು ಒಪ್ಪಿದ ಅವರು, ಕೇಂದ್ರ ಹಾಗೂ ರಾಜ್ಯಗಳು ಈ ದಿಸೆ ಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.