ನವೆಂಬರಲ್ಲಿ 2018ರ ಕೇಂದ್ರ ಬಜೆಟ್?

Published : Jun 27, 2017, 10:04 AM ISTUpdated : Apr 11, 2018, 12:39 PM IST
ನವೆಂಬರಲ್ಲಿ 2018ರ ಕೇಂದ್ರ ಬಜೆಟ್?

ಸಾರಾಂಶ

ಹಣಕಾಸು ವರ್ಷವನ್ನು (ಏ.1ರಿಂದ ಮಾ.31) ಕೂಡಾ ಕ್ಯಾಲೆಂ ಡರ್‌ ವರ್ಷಕ್ಕೆ (ಜ.1ರಿಂದ ಡಿ.31) ಅನುಗುಣವಾಗಿ ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, 2018 ರಿಂದಲೇ ಹೊಸ ನಿಯಮ ಜಾರಿಗೆ ನಿರ್ಧ ರಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಲ್ಲಿ 2018ನೇ ಸಾಲಿನ ಬಜೆಟ್‌ ಮುಂದಿನ ನವೆಂಬರ್‌ನಲ್ಲಿಯೇ ಮಂಡನೆಯಾಗಲಿದೆ. ಅಂದರೆ ಇನ್ನು 4 ತಿಂಗಳಲ್ಲಿ ಕೇಂದ್ರ ಇನ್ನೊಂದು ಬಜೆಟ್‌ ಮಂಡಿಸಲಿದೆ. ದೇಶದ ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ.15ಕ್ಕಿಂತ ಹೆಚ್ಚಿನ ಪಾಲು ಕೃಷಿ ವಲಯದ್ದು. ಜೊತೆಗೆ ದೇಶದ ಗ್ರಾಮೀಣ ಪ್ರದೇಶಗಳ ಶೇ.58ರಷ್ಟುಕುಟುಂಬಗಳ ಮುಖ್ಯ ಆದಾಯ ಕೃಷಿ.

ನವದೆಹಲಿ(ಜೂ.27): ಹಣಕಾಸು ವರ್ಷವನ್ನು (ಏ.1ರಿಂದ ಮಾ.31) ಕೂಡಾ ಕ್ಯಾಲೆಂ ಡರ್‌ ವರ್ಷಕ್ಕೆ (ಜ.1ರಿಂದ ಡಿ.31) ಅನುಗುಣವಾಗಿ ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, 2018 ರಿಂದಲೇ ಹೊಸ ನಿಯಮ ಜಾರಿಗೆ ನಿರ್ಧ ರಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಲ್ಲಿ 2018ನೇ ಸಾಲಿನ ಬಜೆಟ್‌ ಮುಂದಿನ ನವೆಂಬರ್‌ನಲ್ಲಿಯೇ ಮಂಡನೆಯಾಗಲಿದೆ. ಅಂದರೆ ಇನ್ನು 4 ತಿಂಗಳಲ್ಲಿ ಕೇಂದ್ರ ಇನ್ನೊಂದು ಬಜೆಟ್‌ ಮಂಡಿಸಲಿದೆ. ದೇಶದ ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ.15ಕ್ಕಿಂತ ಹೆಚ್ಚಿನ ಪಾಲು ಕೃಷಿ ವಲಯದ್ದು. ಜೊತೆಗೆ ದೇಶದ ಗ್ರಾಮೀಣ ಪ್ರದೇಶಗಳ ಶೇ.58ರಷ್ಟುಕುಟುಂಬಗಳ ಮುಖ್ಯ ಆದಾಯ ಕೃಷಿ.

ಆದರೆ ಪ್ರತಿ ವರ್ಷ ಕೃಷಿ ಚಟುವಟಿಕೆ ಆರಂಭವಾಗುವಷ್ಟರಲ್ಲಿ ಬಜೆಟ್‌ ಪ್ರಕ್ರಿಯೆ ಮುಗಿದು ಹೋಗಿರುತ್ತದೆ. ಒಂದು ವೇಳೆ ಸೂಕ್ತ ಮುಂಗಾರು ಸುರಿಯದೇ ಬರ ಎದುರಾದಲ್ಲಿ ಕೃಷಿಕರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಗಳಿಗೆ ಸಾಧ್ಯವಾಗದು. ಹೀಗಾಗಿ ಹಣಕಾಸು ವರ್ಷವನ್ನು ಮುಂಗಾರು ಸೈಕಲ್‌ಗೆ ಅನುಗುಣವಾಗಿ ಇಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು.

ಇದಕ್ಕೆ ಪೂರಕವೆಂಬಂತೆ ಹಣಕಾಸು ವರ್ಷ ಜ.1ರಿಂದಲೇ ಆರಂಭಿಸುವ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ ಬಳಿಕ, ಈ ಕುರಿತ ಸಾಧ್ಯಾಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಕೆಲವು ತಿಂಗಳ ಹಿಂದೆ ಹಣಕಾಸು ಸಚಿವಾಲಯಕ್ಕೆ ವರದಿ ಸಲ್ಲಿಸಿ, ಹಣಕಾಸು ವರ್ಷ ಜನವರಿ-ಡಿಸೆಂಬರ್‌ಗೆ ಬದಲಾಯಿಸಲು ಶಿಫಾರಸ್ಸು ಮಾಡಿದೆ. ಮತ್ತೊಂದೆಡೆ ಕೆಲಸದ ಅವಧಿಯನ್ನು ಬಳಸಿಕೊಳ್ಳುವಲ್ಲಿ ಪ್ರಸ್ತುತ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲವಾದುದರಿಂದ, ಹಣಕಾಸು ವರ್ಷದ ಬದಲಾವಣೆಯ ಅಗತ್ಯವಿದೆ ಎಂದು ನೀತಿ ಆಯೋಗವೂ ಅಭಿಪ್ರಾಯ ಪಟ್ಟಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ, 2018ರಿಂದಲೇ ಜಾರಿಗೆ ಬರುವಂತೆ ಹಣಕಾಸು ವರ್ಷವನ್ನು ಹಾಲಿ ಇರುವ ಏಪ್ರಿಲ್‌ 1ರಿಂದ ಮಾಚ್‌ರ್‍ 31ರವರೆಗಿನ ಅವಧಿಯ ಬದಲಾಗಿ ಜನವರಿ 1ರಿಂದ ಡಿ.31ರವರೆಗೆ ಇಡಲಿದೆ ಎನ್ನಲಾಗಿದೆ. ಇನ್ನು ಹಣಕಾಸು ವರ್ಷ ಬದಲಾದಲ್ಲಿ ಅದಕ್ಕೆ ತಕ್ಕಂತೆ ಬಜೆಟ್‌ ಮಂಡನೆಯ ಸಮಯವನ್ನೂ ಹಿಂದೂಡಬೇಕಾಗುತ್ತದೆ. ಹೀಗಾಗಿ ಫೆಬ್ರುವರಿ ಅಥವಾ ಮಾಚ್‌ರ್‍ನಲ್ಲಿ ನಡೆಯುವ ಬಜೆಟ್‌ ಪ್ರಕ್ರಿಯೆಯನ್ನು ನವೆಂಬರ್‌ಗೆ ಹಿಂದೂಡಲಾಗುವುದು.

ಪ್ರಸ್ತುತ ಚಾಲ್ತಿಯಲ್ಲಿರುವ ಏ.1ರಿಂದ ಮಾ. 31ರ ವರೆಗಿನ ಹಣಕಾಸು ವರ್ಷ ವ್ಯವಸ್ಥೆಯು 1867ರಲ್ಲಿ, ಆಗಿನ ಬ್ರಿಟಿಷ್‌ ಸರ್ಕಾರದಿಂದ ಜಾರಿಯಾದುದು. ಅಲ್ಲಿ ವರೆಗೆ ಕ್ಯಾಲೆಂಡರ್‌ ವರ್ಷದ ಮೇ 1ರಿಂದ ಏ.30ರ ವರೆಗೆ ಹಣಕಾಸು ವರ್ಷ ವ್ಯವಸ್ಥೆ ಚಾಲ್ತಿಯಲ್ಲಿತ್ತು.

ಮಧ್ಯಪ್ರದೇಶ ಸರ್ಕಾರ ಈಗಾಗಲೇ 2018ರಿಂದಲೇ ಜನವರಿ-ಡಿಸೆಂಬರ್‌ ಮಾದರಿಯಲ್ಲಿ ಹಣಕಾಸು ವರ್ಷಕ್ಕೆ ಪರಿವರ್ತನೆಗೊಳ್ಳುತ್ತಿರುವ ಬಗ್ಗೆ ಘೋಷಿಸಿದ ಮೊದಲ ರಾಜ್ಯವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯರಿಂದ ₹15,000 ಕೋಟಿ ವಿಶೇಷ ಅನುದಾನ: ಅಜಯ್‌ ಧರಂಸಿಂಗ್
ಕೇಂದ್ರದ ಗಾಂಧೀಜಿ ದ್ವೇಷ ಬಯಲಾಗುತ್ತಿದೆ