
ಇಟಾನಗರ(ನ.19): ಸಿಮೆಂಟ್ ಬೆಲೆ ಹೆಚ್ಚು ಎಂದರೆ ಎಷ್ಟಿದ್ದೀತು. 1000 ಅಥವಾ 2000 ಎಂದುಕೊಂಡರೆ, ಖಂಡಿತಾ ಅದು ತಪ್ಪು. ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್'ಗೆ ಬರೋಬ್ಬರಿ 8 ಸಾವಿರ ರು. ಬೆಲೆ ತೆರುತ್ತಿದ್ದಾರೆ.
ಹಾಗಂತ ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್‌ಗೆ ಇಷ್ಟೊಂದು ದುಬಾರಿ ದರ ವಿಧಿಸಲು ಕಾರಣ, ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 156 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು. ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8 ಸಾವಿರ ರು. ದರ ವಿಧಿಸುತ್ತಿದೆ.
50 ಕೆಜಿ ಭಾರ ಹೊತ್ತು ಕೊರೆಯುವ ಚಳಿಯಲ್ಲಿ ಮತ್ತು ದುರ್ಗಮ ಪ್ರದೇಶದಲ್ಲಿ 156 ಕಿ.ಮೀ ಕ್ರಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಿಮೆಂಟ್ ಮೂಟೆಗೆ ಅಷ್ಟು ದರ ವಿಧಿಸಲಾಗುತ್ತಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.