ನಾಳೆ ಕಾರ್ಯಕಾರಣಿಯಲ್ಲಿ ಈಶ್ವರಪ್ಪ ಬಣ ಗೈರು ಹಾಜರಾಗುವುದು ಬಹುತೇಕ ಖಚಿತ

Published : May 05, 2017, 11:43 AM ISTUpdated : Apr 11, 2018, 12:50 PM IST
ನಾಳೆ ಕಾರ್ಯಕಾರಣಿಯಲ್ಲಿ ಈಶ್ವರಪ್ಪ ಬಣ ಗೈರು ಹಾಜರಾಗುವುದು ಬಹುತೇಕ ಖಚಿತ

ಸಾರಾಂಶ

ರಾಜ್ಯ ಬಿಜೆಪಿಯಲ್ಲಿ  ಭಿನ್ನಮತದ ಬಿಸಿ ಕಾವೇರಿರುವ ಹೊತ್ತಲ್ಲೇ ನಾಳೆಯಿಂದ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಲಿದೆ. ಭಿನ್ನಮತದ ಬೇಗೆಯ ನಡುವೆ ನಡೆಯುತ್ತಿರುವ   ಕಾರ್ಯಕಾರಿಣಿ ಕಮಲ ಪಾಳೆಯದಲ್ಲಿ ಸದ್ಯ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕಾರ್ಯಕಾರಿಣಿಯ ಹಿನ್ನಲೆಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಈಶ್ವರಪ್ಪ ಬಣ ಮಾಡಿರುವ ತಂತ್ರವೇನು? ಇದಕ್ಕೆ ಯಡಿಯೂರಪ್ಪ ಬಣದ ಪ್ರತಿತಂತ್ರವೇನು? ಎನ್ನೋದು ಕುತೂಹಲದ ವಿಚಾರವಾಗಿದೆ.

ಬೆಂಗಳೂರು (ಮೇ.05): ರಾಜ್ಯ ಬಿಜೆಪಿಯಲ್ಲಿ  ಭಿನ್ನಮತದ ಬಿಸಿ ಕಾವೇರಿರುವ ಹೊತ್ತಲ್ಲೇ ನಾಳೆಯಿಂದ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಲಿದೆ. ಭಿನ್ನಮತದ ಬೇಗೆಯ ನಡುವೆ ನಡೆಯುತ್ತಿರುವ   ಕಾರ್ಯಕಾರಿಣಿ ಕಮಲ ಪಾಳೆಯದಲ್ಲಿ ಸದ್ಯ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕಾರ್ಯಕಾರಿಣಿಯ ಹಿನ್ನಲೆಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಈಶ್ವರಪ್ಪ ಬಣ ಮಾಡಿರುವ ತಂತ್ರವೇನು? ಇದಕ್ಕೆ ಯಡಿಯೂರಪ್ಪ ಬಣದ ಪ್ರತಿತಂತ್ರವೇನು? ಎನ್ನೋದು ಕುತೂಹಲದ ವಿಚಾರವಾಗಿದೆ.

ಬಿಜೆಪಿಯಲ್ಲಿ ಭಿನ್ನಮತೀಯರ ನಡುವಣ ಸಮರ ಜೋರಾಗಿರುವ ಹೊತ್ತಲ್ಲೇ ಅತ್ತ ಮೈಸೂರಿನಲ್ಲಿ ನಾಳೆ ಕಮಲ ಪಾಳೆಯದ ರಾಜ್ಯ ಕಾರ್ಯಕಾರಿಣಿಗೆ ಆರಂಭವಾಗಲಿದೆ. ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ತೊಡೆತಟ್ಟಿರುವ ಈಶ್ವರಪ್ಪ ಬಣ ಕಾರ್ಯಕಾರಿಣಿ ಗೈರುಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ರಾಜ್ಯ ಬಿಜೆಪಿ ‌ನಾಯಕತ್ವದ ವಿರುದ್ಧ ಬಂಡಾಯದ‌ ಬಾವುಟ‌‌ ಹಾರಿಸಿರುವ ಈಶ್ವರಪ್ಪ ‌ಬಣ ಕಾರ್ಯಕಾರಿಣಿಗೆ ಗೈರುಹಾಜರಾಗುವ ಮೂಲಕ ಖಡಕ್ ಸಂದೇಶ ನೀಡಲು ಸಿದ್ಧತೆ ನಡೆಸಿದೆ. ಈಶ್ವರಪ್ಪ ಬಣ ಗೈರುಹಾಜರಾದರೂ ಸಹ ಶತಾಯಗತಾಯ ಈ ಕಾರ್ಯಕಾರಿಣಿಯ ಯಶಸ್ವಿಗೊಳಿಸಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇದೇ 8ರಂದು ರಾಯಚೂರಿನಲ್ಲಿ ರಾಯಣ್ಣ ಬ್ರಿಗೇಡ್​ನ ಅಭ್ಯಾಸ ವರ್ಗ ನಡೆಸುವ ಮೂಲಕ ತೊಡೆತಟ್ಟಲು ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ.

ಇನ್ನು ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಬೆಂಬಲಿಗರು ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಮೂಲಕ ಭಿನ್ನಮತೀಯರ ಮಟ್ಟಹಾಕಬೇಕೆಂಬ ಸಂದೇಶವನ್ನ ಪಕ್ಷದ ವರಿಷ್ಟರಿಗೆ ರವಾನಿಸಲು ಸಿದ್ದತೆ ನಡೆಸಿದ್ದಾರೆ. ಹೀಗೆ ಉಭಯ ಬಣಗಳು ತಮ್ಮದೇ ರಾಜಕೀಯ ಲೆಕ್ಕಾಚಾರಗಳೊಂದಿಗೆ ಮುಂದುವರಿಯುತ್ತಿವೆ. ಆದರೆ ರಾಜ್ಯ ಬಿಜೆಪಿಯ ಬಿಕ್ಕಟ್ಟಿನ ಕುರಿತು ವರದಿ‌ ಪಡೆದಿರುವ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮದೇ ಮೂಲಗಳ ಮೂಲಕ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಉಭಯ ಬಣಗಳ ಕಾರ್ಯಕಾರಿಣಿ ರಾಜಕಾರಣ ಮುಗಿಯುತ್ತಿದ್ದಂತೆ ಅಮಿತ್​ ಷಾ ಇವರೆಲ್ಲರ ವೈಯಕ್ತಿಕ ಪ್ರತಿಷ್ಟೆಯ ರಾಜಕಾರಣದ ಲೆಕ್ಕಾಚಾರ ‌ತಲೆಕೆಳಗಾಗಿಸುವ ತೀರ್ಮಾನ ‌ನೀಡುವ ಸಾಧ್ಯತೆ ‌ನಿಚ್ಚಳವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ