
ಬೆಂಗಳೂರು(ನ.26): ದೇಶಾದ್ಯಂತ ಸಂಚಲನ ಮೂಡಿಸಿದ್ ಐಎಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇವತ್ತು ಮುಖ್ಯ ಕಾರ್ಯದರ್ಶಿಗೆ 40 ಪುಟಗಳ ವರದಿ ಸಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲಿನ ಮೋಹವೇ ಆತ್ಮಹತ್ಯೆಗೆ ಕಾರಣ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರೋಹಿಣಿ ಸಿಂಧೂರಿ ಜೊತೆ ಡಿಕೆ ರವಿಗೆ ಮೋಹ
ಐಎಎಸ್ ತರಬೇತಿ ವೇಳೆಯಲ್ಲೇ ಡಿ.ಕೆ. ರವಿಗೆ ರೋಹಿಣಿ ಮೇಲೆ ರವಿಗೆ ಪ್ರೀತಿ ಅಂಕುರಿಸಿತ್ತು. 2014 ಸೆ.1 ರಿಂದ 2015 ಮಾರ್ಚ್ 15 ರ ತನಕ ನಿರಂತರ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ ಡಿ.ಕೆ. ರವಿ 188 ಕರೆಗಳನ್ನು ಮಾಡಿದ್ದರೆ, ರೋಹಿಣಿ ಇದೇ ಅವಧಿಯಲ್ಲಿ 239 ಭಾರಿ ಕರೆ ಮಾಡಿದ್ದರು. ರವಿ ಮಾಡಿದ್ದ ಒಂದು ಡಿಮ್ಯಾಂಡ್ ರೋಹಿಣಿ ಸಂಪರ್ಕ ನಿಲ್ಲಿಸುವಂತೆ ಮಾಡಿತ್ತು ಎಂದು ಉಲ್ಲೇಖಿಸಲಾಗಿದೆ.
ರೋಹಿಣಿ ಬಗ್ಗೆ ರವಿಗೆ ಮೋಹ ತೀವ್ರಗೊಂಡಿತ್ತು. ಇದರಿಂದ ತಮ್ಮ ವರ್ಷಸ್ಸು, ಕೌಟುಂಬಿಕ ಜೀವನಕ್ಕೆ ತೊಂದರೆ ಆಗುತ್ತೆ ಎಂದು ಅರಿತಿದ್ದ ರೋಹಿಣಿ ದೂರ ಸರಿದಿದ್ದರು. ರೋಹಿಣಿ ಕಾಲ್ ಮಾಡದೆ ಇದ್ದಾಗ ರವಿ ಪರಿತಪಿಸುತ್ತಿದ್ದರು. ಮಾರ್ಚ್ 15ರಂದು ರವಿಗೆ ಹಪಾಹಪಿ ಹೆಚ್ಚಾಗಿತ್ತು, ಪತ್ನಿಗಿಂತಲೂ ರೋಹಿಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ರವಿ ವಾಟ್ಸ್ ಆ್ಯಪ್ ಮೂಲಕ ರೋಹಿಣಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಯಾವುದೇ ಸಮಸ್ಯೆ ಬಂದಾಗಲೂ ರೋಹಿಣಿ ಜೊತೆ ಮಾತನಾಡುತ್ತಿದ್ದರು. 2015 ಫೆಬ್ರವರಿ ಸಂಸದ ಮುನಿಯಪ್ಪ ವಿಚಾರ, ಭೂಮಿ ವಿಚಾರದ ಬಗ್ಗೆಯೂ ರೊಹಿಣಿ ಜತೆ ಚರ್ಚೆ ನಡೆಸಿದ್ದರು.
ಹೆಂಡತಿಯ ವಿರೋಧ ಹಿನ್ನೆಲೆಯಲ್ಲಿ ವೈಯಕ್ತಿಕ ಸಂಖ್ಯೆ ಬದಲು ಕಚೇರಿ ಸಂಖ್ಯೆಯಲ್ಲಿ ನಿರಂತರ ಸಂಪರ್ಕ ಹೊಂದಿದ್ದರು. ರವಿ-ರೋಹಿಣಿ ಸಂಭಾಷಣೆ ಸುದೀರ್ಘವಾಗಿರುತ್ತಿತ್ತು. ಭೂಮಿ ಖರೀದಿಯಲ್ಲಿ ಹಣ ಹೂಡುವಂತೆ ಒತ್ತಾಯ ಮಾಡಿದ್ದ ಬಗ್ಗೆ ರೋಹಿಣಿ ಸಿಬಿಐಗೆ ಹೇಳಿಕೆ ನೀಡಿದ್ದಾರೆ.
- 2015 ಮಾರ್ಚ್ ನಂತರ ಖುದ್ದು ಭೇಟಿಗೆ ರೋಹಿಣಿಗೆ ಡಿಕೆ ರವಿ ಒತ್ತಾಯ
- ರವಿ ಭೇಟಿಗೆ ರೋಹಿಣಿ ನಿರಾಸಕ್ತಿ
- 2015 ಮಾರ್ಚ್ 3412 ಸೆಕೆಂಡ್ ಗಳ ಕಾಲ ಮಾತುಕತೆ
- ಮಾರ್ಚ್ 13ರಂದು ದೆಹರಲಿಗೆ ತೆರಳಿದ್ದ ಐಎಎಸ್ ಅಧಿಕಾರಿ ರೋಹಿಣಿ
- ಮಾರ್ಚ್ 14 ರಂದು ಬೆಳಗ್ಗೆ 5 ಗಂಟೆಗೆ ರವಿಯಿಂದ ರೋಹಿಣಿಗೆ ಮೆಸೇಜ್
- ರೋಹಿಣಿಯಿಂದ ನೋ ರಿಪ್ಲೈ
- ರಾತ್ರಿ 10.35ಕ್ಕೆ ರೋಹಿಣಿಯಿಂದ ಮೆಸೇಜ್
- ಯಾವಾಗ ಕರೆ ಮಾಡಬೇಕೆಂದು ಕೇಳಿ ರವಿಗೆ ಮೆಸೇಜ್
- ಮಾವನ ಮನೆಯಲ್ಲಿದ್ದ ನಾಳೆ ಕಾಲ್ ಮಾಡುವಂತೆ ರವಿ ಮೆಸೇಜ್
- ಅದೇ ದಿನ ಸೊಣ್ಣೇಗೌಡ, ಹರಿಜೃಷ್ಣ ಜತೆ ರಿಯಕಲ್ ಎಸ್ಟೇಟ್ ನಮಾತು
- ಕಾಲ್ ರೆಕಾರ್ಡ್ ಪ್ರಕಾರ ಪತ್ನಿ ಕುಸುಮಾರೊಂದಿಗೆ ದಿನ ಕಳೆದಿದ್ದ ಡಿಕೆ ರವಿ
- 2015 ಮಾರ್ಚ್ 15 ರಂದು ಜಮೀನು ಹುಡುಕಲು ತೆರಳಿದ್ದ ರವಿ
- ಬೆಳಗ್ಗೆ 11.20 , 11.51ರ ನಡುವೆ ನಾಲ್ಲು ಬಾರಿ ರೋಹಿಣಿಗೆ ರವಿ ಕರೆ
- ಮಧ್ಯಾಹ್ನ 1.30ಕ್ಕೆ ರವಿಗೆ ಪತ್ನಿ ಕುಸುಮಾರಿಂದ ಕರೆ
- ರವಿ ಜತೆ ತಂದೆ ಮಾತನಾಡಬೇಕು ಎಂದಿದ್ದ ಕುಸುಮಾ
- ಬೆಂಗಳೂರು ಹೊರವಲಯದಲ್ಲಿನ ಕೆಲ ಜಮೀನು ನೋಡಿದ್ದ ರವಿ
- ತೋಟಗಾರಿಕೆ ಸಚಿವರ ಪಿಎ ಲಕ್ಷಣಪ್ಪಗೆ ಕರೆ
- ಸೀಜ್ ಮಾಡಿರುವ ಬಸ್ ಬಿಡುಗಡೆಗೆ ರವಿಗೆ ಮನವಿ
- ದಂಡ ಪಾವತಿಸಿದ ನಂತರ ಬಸ್ಸುಗಳನ್ನು ಬಿಡುಗಡೆ ಮಾಡುವುದಾಗಿ ರವಿ ಹೇಳಿಕೆ
- ಸಂಜೆ 3.52ಕ್ಕೆ ರವಿಯಿಂದ ರೋಹಿಣಿಗೆ ಸಂದೇಶ
- ಆಕೆಯ ಕರೆ ಹಾಗೂ ಸಲಹೆಗಾಗಿ ಕಾಯುತ್ತಿರುವುದಾಗಿ ಮೆಸೇಜ್
- ಸಂಜೆ 4.25ಕ್ಕೆ ರವಿಯಿಂದ ರೋಹಿಣಿಗೆ ಮೆಸೇಜ್
- ಇವತ್ತು ಬಹಳ ಭಯಂಕರ ದಿನ ನಾನು ಗಂಭಿರ ನಿರ್ಧಾರ ತೆಗೆದುಕೊಳ್ಲುವುದಅಗಿ ಮೆಸೇಜ್
- ನೀನು ಸೂಕ್ತ ಮಾರ್ಗದರ್ಶನ ನೀಡ್ತೀಯಾ ಎಂದುಕೊಂಡಿದ್ದೆ..
- ರಾತ್ರಿ 9 ಗಂಟೆ ತನಕ ನಿನ್ನ ಆಹ್ವಾನ, ದೂರವಾಣಿಗೆ ಕರೆಗೆ ರವಿ ವೈಟಿಂಗ್
- ಸಂಜೆ 5.09ಕ್ಕೆ ರವಿಗೆ ರೋಹಿಣಿ ಮಾತುಕಥೆ 565 ಸೆಕೆಂಡ್ ಮಾತು ಕಥೆ
- 5.24 ಕ್ಕೆ ಮತ್ತೆ ರವಿಯಿಂದ ರೋಹಿಣಿಗೆ ಮೆಸೇಜೆ
- ನನಗೆ ಕರೆಮಾಡಬೇಡ, ಮಾತನಾಡಲು ಯತ್ನಿಸಬೇಡ
- ನಿನ್ನೆ ಮೇಲೆ ನನ್ನ ಪ್ರೀತಿಯ ಬಗ್ಗೆ ಎಲ್ಲೂ ಹೇಳಬೇಡ
- ಮುಂದಿನ ಜನ್ಮ ಅಂತ ಒಂದಿದ್ದರೆ ನಾವಿಬ್ಬರೂ ಜೊತೆಯಾಗಿರೋಣ
- ನಾನು ಎಲ್ಲದನ್ನು ಬಿಟ್ಟು ತೆರಳುತ್ತಿದ್ದೇನೆ
- ರೋಹಿಣೆ ಗೆ ರವಿ ಕೊನೆ ಸಂದೇಶ
- ತಕ್ಷಣ ರೋಹಿಣಿಯಿಂದ ರಿಪ್ಲೈ
- ಸ್ಟುಪಿಡ್ ಥರ ಆಡ್ಬೇಡ ನಾನು ನಿನ್ನೊಂದಿಗೆ ಮಾತನಾಡುವುದಿಲ್ಲ
- ಸಂಜೆ 7.18ಕ್ಕೆ ಸಿಂದೂರಿಯಿಂದ ಕರೆ 1844 ಸೆಕೆಂಡ್ ಮಾತುಕಥೆ
- ಆಗ ಆತ್ಮಹತ್ಯೆ ಕುರಿತು ಯಾವುದೇ ಮಾತುಕತೆ ನಡೆಸದ ರವಿ
- ರವಿ ತೊಂದರೆಗೆ ನಾನು ಸಮಾಧಾನ ಹೇಳಿದ್ದೆ
- ನಿನಗೆ ನೀನು ಬಯಸಿದ್ದಂತಹ ಪೋಸ್ಟಿಂಗ್ ಸಿಗುವುದಾಗಿ ಸಮಾಧಾನ ಹೇಳಿದ್ದೆ
- ಅಂದು ಮತ್ತೆ ರೋಹಿಣಿ-ರವಿ ಸಂಭಾಷಣೆ ಆಗಿಲ್ಲ
- ಅಂದು ರಾತ್ರಿ 7.30 ರ ನಂತರ ಮನೆಗೆ ರವಿ ಬಂದ್ರು ಎಂದ ಕುಸುಮಾ
- ರೋಹಿಣಿಗೆ ಬೆಳಗ್ಗೆ 9.50ಕ್ಕೆ ವಿವರವಾದ ಮೆಸೇಜ್
- ತನಗಿದ್ದ ಪ್ರೀತಿಯ ನಿವೇದನ
- ಎಲ್ಲಾ ಮೆಸೇಜ್ ಡಿಲಿಟ್ ಮಾಡಿದ್ದೀನಿ ಎಂದು ಮೆಸೇ್ಜ್
- ಡೆಡ್ ಬಾಡಿ ಅಪ್ಪಿ ಮುತ್ತಿಡುವಂತೆ ಮನವಿ
- 10.40ಕ್ಕೆ ತನ್ನ ಫ್ಲ್ಯಾಟ್`ಗೆ ತೆರಳುತ್ತಿರುವುದಾಗಿ ಪಿಎಗೆ ರವಿ ಹೇಳಿಕೆ
- ಮಧ್ಯಾಹ್ನದ ಊಟಕ್ಕೆ ಮಾವನ ಮನೆಗೆ ಕಾರು ಕಳಿಸುವಂತೆ ಸೂಚನೆ
- ಬೆಳಗ್ಗೆ 11 ಕ್ಕೆ 9ನೇ ಮಹಡಿಯಲ್ಲಿರುವ ಫ್ಲ್ಯಾಟ್ ಗೆ ಪಯಣ
- 11.12ಕ್ಕೆ ರೋಹಿಣಿಗೆ ಕರೆ, ಸುಧೀರ್`ನಿಂದ ಕರೆ ಸ್ವೀಕಾರ
- ಕೇವಲ 15 ಸೆಕೆಂಡ್`ಗಳಲ್ಲಿ ಕರೆ ಕಟ್
- ರವಿ ಮೆಸೇಜ್ ಬಗ್ಗೆ ಪತಿಗೆ ತಿಳಿಸಿದ್ದ ರೋಹಿಣಿ
- ಸುದೀರ್ ರೆಡ್ಡಿ ಧ್ವನಿ ಕೇಳ್ತಿದ್ದಂತೆ ರವಿಯಿಂದ ಕುಶಲೋಪರಿ ವಿಚಾರಣೆ
- ಮತ್ತೆ ಕರೆಮಾಡಿದ್ದ ಸುದೀರ್ ರೆಡ್ಡಿ, ಕರೆ ಸ್ವೀಕರಿಸದ ರವಿ
- 12.15ಕ್ಕೆ ಉಪ ಆಯಕ್ತ ಮಹಾದೇವ್ ಕರೆ ಮಾಡಿದಾಗಲೂ ರವಿ ನೋ ರಿಪ್ಲೈ
- ಸಂಜೆ 3.30ಕ್ಕೆ ಡ್ರೈವರ್`ಗೆ ಕರೆಮಾಡಿದ ರವಿ ಪಿಎ
- ಸಂಜೆ 4.30 ಆದ್ರೂ ರವಿ ಬಾರದಿದ್ದ ಕಾರಣ ಫ್ಲ್ಯಾಟ್`ಗೆ ತೆರಳಿದ್ದ ಡ್ರೈವರ್
- ಕಾಲಿಂಗ್ ಬೆಲ್`ಗೂ ನೋ ರಿಪ್ಲೈ
- ಮತ್ತೆ 5.30ಕ್ಕೆ ಸೆಂಟ್ರಿಯೊಂದಿಗೆ ಮತ್ತೆ ಫ್ಲ್ಯಾಟ್ ಗೆ ತೆರಳಿದ ಡ್ರೈವರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.