
ನವದೆಹಲಿ (ಜು.07): ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದಾರೆ.
2006ರಲ್ಲಿ ರೈಲ್ವೇ ಸಚಿವರಾಗಿದ್ದಾಗ ರಾಂಚಿ ಹಾಗೂ ಪುರಿಯಲ್ಲಿ ಹೊಟೇಲ್ ನಿರ್ಮಾಣ, ನಿರ್ವಹಣೆ ಹಾಗೂ ನಡೆಸುವ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿರುವ ವಿಚಾರದಲ್ಲಿ ಲಾಲೂ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯು ದೆಹಲಿ, ಪಾಟ್ನಾ, ಗುರ್ಗಾಂವ್ ಹಾಗೂ ಇನ್ನಿತರ ಸ್ಥಳಗಳಲ್ಲಿ 12 ಕಡೆ ದಾಳಿ ನಡೆಸಿದೆ.
ದಾಳಿಗೆ ಪ್ರತಿಕ್ರಿಯಿಸಿರುವ ಆರ್’ಜೆಡಿ ನಾಯಕ ಮನೋಜ್ ಜಾ, ಇಂದಿನ ದಿನ ಇತಿಹಾಸಲ್ಲಿ ಕರಾಳ ದಿನವಾಗಿ ಗುರುತಿಸಲಾಗುವುದು. ತನಿಖಾ ಸಂಸ್ಥೆಗಳು ಬಿಜೆಪಿಯ ಮೈತ್ರಿಸಂಸ್ಥೆಗಳಾಗಿವೆ, ಹಾಗೂ ಬಿಜೆಪಿಯು ಅವುಗಳನ್ನು ಬಳಸುತ್ತಿದೆ ಎಂದಿದ್ದಾರೆ.
ಲಾಲೂ ನಿವಾಸ ಮೇಲೆ ಸಿಬಿಐ ದಾಳಿಗೆ ಸಂಬಂಧಿಸಿ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಆರ್’ಜೆಡಿ ಜೊತೆ ಮೈತ್ರಿ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರನ್ನು ಆಗ್ರಹಸಿದ್ದಾರೆ.
ಅಪರಾಧ, ಭ್ರಷ್ಟಾಚಾರ ತಡೆ ಬಗ್ಗೆ ಮಾತನಾಡುವ ನಿತೀಶ್ ಈ ಬಗ್ಗೆ ಮೌನವನ್ನು ಮುರಿಯಲೇಬೇಕೆಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.