16 ವರ್ಷ ಹಿಂದಿನ ಪ್ರಕರಣ : ಮಾಜಿ ಸಿಎಂ ವಿರುದ್ಧ ಸಿಬಿಐ ಕೇಸ್‌

Published : Jul 13, 2019, 10:55 AM IST
16 ವರ್ಷ ಹಿಂದಿನ ಪ್ರಕರಣ : ಮಾಜಿ ಸಿಎಂ ವಿರುದ್ಧ ಸಿಬಿಐ ಕೇಸ್‌

ಸಾರಾಂಶ

16 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಸಿಬಿಐ ಮಾಜಿ ಸಿಎಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. 

ನವದೆಹಲಿ [ಜು.13]: ಸರ್ಕಾರಿ ಯೋಜನೆಯೊಂದರ ಗುತ್ತಿಗೆಯನ್ನು ತಮ್ಮ ಸಹೋದರನಿಗೆ ನೀಡಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅರುಣಾಲ ಪ್ರದೇಶ ಮಾಜಿ ಮುಖ್ಯಮಂತ್ರಿ ನಬಂ ಟುಕಿ ವಿರುದ್ಧ ಸಿಬಿಐ 16 ವರ್ಷದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ. 

2003ರಲ್ಲಿ ಗ್ರಾಹಕ ವ್ಯವಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿದ್ದ ನಬಂ ಟುಕಿ, ನಿಯಮಗಳನ್ನು ಗಾಳಿಗೆ ತೂರಿ ಸಹೋದರ ನಬಂ ತಗಂಗೆ 3.20 ಕೋಟಿ ರು. ಗುತ್ತಿಗೆಯನ್ನು ನೀಡಿದ್ದರು.

ಈ ಸಂಬಂಧ ನಬಂ ತಗಂ ವಿರುದ್ಧವೂ ಪ್ರಕರಣ ದಾಖಲಾಗಿದೆ. 2011​ರಿಂದ 16ರ ಅವಧಿಯಲ್ಲಿ ಟುಕಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್