ನಮ್ಮ ಬೆಳೆಗಳ ರಕ್ಷಣೆಗೆ ಸೋಮವಾರ ಮತ್ತೆ ವಿಧಾನಮಂಡಲ ಅಧಿವೇಶನ

By Internet DeskFirst Published Oct 2, 2016, 2:51 AM IST
Highlights

ಬೆಂಗಳೂರು(ಅ.02): ಕಾವೇರಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿಲುವಿನಿಂದ ಹಿಂದೆ ಸರಿದಿಲ್ಲ. ಯಾವುದೇ ಕಾರಣಕ್ಕೂ ನೀರು ಬಿಡಲ್ಲ ಎನ್ನುವ ಸಂಕಲ್ಪಕ್ಕೆ ಸಿಎಂ ಸಿದ್ರಾಮಯ್ಯ ಅಂಟಿಕೊಂಡಿದ್ದಾರೆ. ಅಲ್ಲದೆ, ಸೋಮವಾರ ಮತ್ತೊಮ್ಮೆ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ಇನ್ನು ನಾಳೆಯೇ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಕುರಿತು ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂಕೋರ್ಟ್​'ಗೆ ಸಲ್ಲಿಸಲು ಕೂಡ ಸರ್ಕಾರ ಸೂಚಿಸಿದೆ.

ತಮಿಳ್ನಾಡಿಗೆ ನೀರು ಬಿಡುವ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಸೋಮವಾರ  ಮತ್ತೆ ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಿದೆ. ನಿನ್ನೆಯ ಮಂತ್ರಿ ಪರಿಷತ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಆರ್ ಎಸ್ ನೀರನ್ನು ಕುಡಿಯಲು ಮಾತ್ರ ಬಳಸಲು ಸದನ ಅನುಮತಿ ನೀಡಿದೆ. ಆದ್ರೆ ರಾಜ್ಯದ ರೈತರ ಬೆಳೆಗೂ ನೀರು ಬಿಡಲು ಸದನದ ಅನುಮತಿ ಪಡೆಯಬೇಕಿರೋ ಕಾರಣ ಅಧೀವೇಶನ ಕರೆಯಲಾಗಿದೆ ಅಂತ ಸಿದ್ರಾಮಯ್ಯ ಹೇಳಿದ್ದಾರೆ.

Latest Videos

ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

ದ್ವಿಸದಸ್ಯ ಪೀಠ ತನ್ನ ವ್ಯಾಪ್ತಿಗೆ ಬಾರದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಆದೇಶ ಮಾಡಿದೆ. ಈ ಮಂಡಳಿಗೆ ಸದಸ್ಯರನ್ನ ನೇಮಕ ಮಾಡಲ್ಲ. ಕಾವೇರಿ ಮ್ಯಾನೇಜ್'​ಮೆಂಟ್ ಬೋರ್ಡ್ ಬೇಡ ಅಂತ ಸೋಮವಾರವೇ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಅಂತಲೂ ಮುಖ್ಯಮಂತ್ರಿಗಳು ಹೇಳಿದ್ರು.

ಇದೇ ವೇಳೆ, ರಾಜ್ಯದ ಪರ ವಕೀಲ, ಫಾಲಿ ನಾರಿಮನ್ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯದ ಪರ ವಾದ ಮಾಡಲು ಹಿಂದೆ ಸರಿದರೆ ಬೇರೆ ಹಿರಿಯ ವಕೀಲರ ನಿಯೋಜನೆಗೂ ರಾಜ್ಯ ಸರ್ಕಾರ ನಿರ್ಧರಿಸಿದೆ.

ಒಟ್ಟಿನಲ್ಲಿ ನಿನ್ನೆ ಇಡೀ ದಿನ ಸಿಎಂ ಸಿದ್ರಾಮಯ್ಯ ಕಾವೇರಿ ನೀರು ಉಳಿಸಿ ರಾಜ್ಯ ರೈತರ ರಕ್ಷಣೆಗಾಗಿ ಸರಣಿ ಸಭೆ ನಡೆಸಿದ್ದರು. ಇದರ ಟೋಟಲ್ ಔಟ್​ಪುಟ್​  ತಮಿಳುನಾಡಿಗೆ ನೀರು ಬಿಡದಿರಲು ನಿರ್ಧರಿಸಿರುವುದು. ರಾಷ್ಟ್ರಪತಿ ಭೇಟಿಗೆ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳುವುದು.

click me!