
ಬೆಂಗಳೂರು (ಅ.07): ಕೇಂದ್ರ ಜಲಸಂಪನ್ಮೂಲ ಸಚಿವಾಲಯದಿಂದ ನೇಮಿಸಲಾಗಿರುವ ಜಿ.ಎಸ್.ಝಾ ನೇತೃತ್ವದ ಉನ್ನತ ತಾಂತ್ರಿಕ ತಂಡವು ಇಂದು ಕಾವೇರಿಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರ್ನಲ್ಲಿ ಮದ್ದೂರಿಗೆ ಭೇಟಿ ನೀಡಲಿರುವ ತಂಡವು ಬಳಿಕ ತೈಲೂರು, ಸೋಮನಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ವೀಕ್ಷಿಸಲಿದೆ.
ಮಧ್ಯಾಹ್ನ 1.30ಕ್ಕೆ ಮದ್ದೂರಿನ ಪ್ರವಾಸ ಮಂದಿರದಲ್ಲಿ ಊಟದ ಬಳಿಕ 2.45ಕ್ಕೆ ಮದ್ದೂರಿನ ಹನುಮಂತನಗರ, ದೊಡ್ಡರಸಿನಕೆರೆ, ಮಾದರಹಳ್ಳಿಕೆರೆ, ಅಚ್ಚುಕಟ್ಟುಪ್ರದೇಶಕ್ಕೆ ಭೇಟಿ ನೀಡಲಿದೆ.
ಬಳಿಕ ಮಳ್ಳವಳ್ಳಿ ತಾಲೂಕಿನ ಶೆಟ್ಟಹಳ್ಳಿ, ಕಿರುಗಾವಲು, ಮಳವಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ತಂಡವು ಸಂಜೆ 6 ಗಂಟೆಗೆ ಮದ್ದೂರಿನಿಂದ ಕೆಆರ್ಎಸ್ಗೆ ಹೊರಟು ಕೆಆರ್ಎಸ್ ನೀರಿನ ಮಟ್ಟ ಪರಿಶೀಲಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.