ಕ್ಯೂಬಾದಲ್ಲಿ ಭೀಕರ ಚಂಡಮಾರುತ; ಅಮೆರಿಕಾದಲ್ಲಿ 56 ಲಕ್ಷ ಮಂದಿ ಸ್ಥಳಾಂತರ

By Suvarna Web DeskFirst Published Sep 9, 2017, 9:07 PM IST
Highlights

ಇಂದು ಬೆಳಗ್ಗೆ ಕ್ಯೂಬಾ ಕರಾವಳಿಯನ್ನು ಅಪ್ಪಳಿಸಿದ ಭೀಕರ ಚಂಡಮಾರುತ ಇರ್ಮಾ, ಅಮೆರಿಕಾದ ಫ್ಲೋರಿಡಾದತ್ತ ಮುನ್ನುಗ್ಗಿದೆ. ಈ ಹಿನ್ನಲೆಯಲ್ಲಿ ಫ್ಲೋರಿಡಾದಿಂದ 5.6 ದಶಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಫ್ಲೋರಿಡಾ, ಅಮೆರಿಕಾ: ಇಂದು ಬೆಳಗ್ಗೆ ಕ್ಯೂಬಾ ಕರಾವಳಿಯನ್ನು ಅಪ್ಪಳಿಸಿದ ಭೀಕರ ಚಂಡಮಾರುತ ಇರ್ಮಾ, ಅಮೆರಿಕಾದ ಫ್ಲೋರಿಡಾದತ್ತ ಮುನ್ನುಗ್ಗಿದೆ. ಈ ಹಿನ್ನಲೆಯಲ್ಲಿ ಫ್ಲೋರಿಡಾದಿಂದ 5.6 ದಶಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಶನಿವಾರ ಬೆಳಗ್ಗೆ ಕ್ಯೂಬಾಕ್ಕೆ ಅಪ್ಪಳಿಸಿರುವ ಇರ್ಮಾದಿಂದಾಗಿ ಭಾರೀ ಮಳೆಯಾಗಿದೆಯಲ್ಲದೇ,  ದೊಡ್ಡ ಅನಾಹುತಕ್ಕೂ ಕಾರಣವಾಗಿದೆ. ಈಗಾಗಲೇ 20 ಮಂದಿಯನ್ನು ಇರ್ಮಾ ಬಲಿಪಡೆದಿದೆ.

ಗಂಟೆಗೆ 140 ಕಿ.ಮಿ. ವೇಗದಲ್ಲಿ ಚಂಡಮಾರುತ ಫ್ಲೋರಿಡಾ ಕರಾವಳಿಯನ್ನು ಅಪ್ಪಳಿಸಲಿದೆ ಎಂದಿರುವ ಫ್ಲೋರಿಡಾ ಗವರ್ನರ್ ರಿಕ್ ಸ್ಕಾಟ್, ಈಗಾಗಲೇ 25 ಸಾವಿರ ಮಂದಿ ವಿದ್ಯುತ್ ಸಂಪರ್ಕವನ್ನು ಕಡಿದುಕೊಂಡಿದ್ದಾರೆಂದು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ಭಾರೀ ಮಳೆಯಾಗಲಿದ್ದು, 12 ಅಡಿಗಳವರೆಗೆ ನೀರಿನ ಮಟ್ಟರಷ್ಟು ಹೆಚ್ಚಲಿದೆ ಎಂದು ಹೇಳಲಾಗಿದೆ.

ಇರ್ಮಾ ಎದುರಿಸಲು ಅಮೆರಿಕಾ ಸರ್ಕಾರವು ಈಗಾಗಲೇ ಮಿಲಿಟರಿ ಹಾಗೂ ನ್ಯಾಷನಲ್ ಗಾರ್ಡ್ ಟ್ರೂಪ್’ಗಳನ್ನು ನಿಯೋಜಿಸಿದೆ. 6 ನೌಕೆ, 1 ವಿಮಾನ ಕ್ಯಾರಿಯರ್ ನೌಕೆ, ಹಲವಾರು ವಿಮಾನಗಳು ಹಾಗೂ ಸಾವಿರಾರು ಗ್ಯಾಲನ್ ಇಂಧನವನ್ನು ಕಳುಹಿಸಲಾಗಿದೆ.

click me!