
ಲಂಡನ್(ಜೂ.29): ಜನರು ಬ್ಯಾಂಕುಗಳಿಗೆ ಹೋಗಿ ಹಣ ತೆಗೆಯುವ ವಿಧಾನವನ್ನೇ ಬದಲಾಯಿಸಿದ ಜಗತ್ತಿನ ಮೊದಲ ಎಟಿಎಂಗೆ ಈಗ 50 ವರ್ಷಗಳ ಸಂಭ್ರಮ. ಸ್ಕಾಟಿಷ್ ಸಂಶೋಧಕ ಷೆಫರ್ಡ್- ಬ್ಯಾರನ್ ಅವರು ಉತ್ತರ ಲಂಡನ್‌ನ ಎನ್‌ಫೀಲ್ಡ್‌ನಲ್ಲಿರುವ ಬಾರ್ಕ್ಲೇಸ್ ಬ್ಯಾಂಕ್‌ನ ಶಾಖೆಯೊಂದರಲ್ಲಿ 1967 ಜು.27ರಂದು ಜಗತ್ತಿಗೆ ಎಟಿಎಂ (ಆಟೋಮೇಟೆಡ್ ಟೆಲ್ಲರ್ ಮಷಿನ್) ಅನ್ನು ಪರಿಚಯಿಸಿದ್ದರು. ಬ್ರಿಟಿಷ್ ನಟ ರೆಗ್ ವರ್ನೆ ಅವರು ಎಟಿಎಂ ಮೂಲಕ ಹಣ ತೆಗೆದ ಮೊದಲ ವ್ಯಕ್ತಿ ಎನಿಸಿದ್ದರು. ಇಂದು ವಿಶ್ವದೆಲ್ಲೆಡೆ ಸುಮಾರು 30 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ ಒಟ್ಟು 2 ಲಕ್ಷ ಎಟಿಎಂಗಳಿವೆ. ಬ್ರಿಟನ್‌ನಲ್ಲಿ 70000 ಎಟಿಎಂಗಳು ಕಾರ್ಯವಹಿಸುತ್ತಿವೆ. ಇಂದು ಡಿಜಿಟಲ್ ಬ್ಯಾಂಕಿಂಗ್, ಕಾರ್ಡುಗಳ ಬಳಕೆಯ ನಡುವೆಯೂ ಜನರು ಹಣದ ವಹಿವಾಟಿಗೆ ಎಟಿಎಂಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.