ಮುಂದಿನ ದಿನಗಳಲ್ಲಿ ಕಾರಿನ ಜೊತೆಯೇ ನಂಬರ್‌ ಪ್ಲೇಟ್‌: ನಿತಿನ್ ಗಡ್ಕರಿ

Published : Apr 02, 2018, 10:44 AM ISTUpdated : Apr 14, 2018, 01:13 PM IST
ಮುಂದಿನ ದಿನಗಳಲ್ಲಿ ಕಾರಿನ  ಜೊತೆಯೇ ನಂಬರ್‌ ಪ್ಲೇಟ್‌:  ನಿತಿನ್ ಗಡ್ಕರಿ

ಸಾರಾಂಶ

ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ನೂತನ ಕಾರಿನ ನಂಬರ್‌ ಪ್ಲೇಟನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪಾದನೆ ಸಂದರ್ಭದಲ್ಲೇ ನಂಬರ್‌ ಪ್ಲೇಟ್‌ ಅಳವಡಿಸಿದ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನವ ದೆಹಲಿ (ಏ. 02):  ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ನೂತನ ಕಾರಿನ ನಂಬರ್‌ ಪ್ಲೇಟನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪಾದನೆ ಸಂದರ್ಭದಲ್ಲೇ ನಂಬರ್‌ ಪ್ಲೇಟ್‌ ಅಳವಡಿಸಿದ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಹಾಲಿ ನಂಬರ್‌ ಪ್ಲೇಟ್‌ಗಳನ್ನು ಸಾಮಾನ್ಯವಾಗಿ ಆಯಾ ರಾಜ್ಯಗಳಲ್ಲಿರುವ ಪರವಾನಗಿ ಹೊಂದಿದ ಏಜೆನ್ಸಿಗಳು ಮತ್ತು ಆರ್‌ಟಿಒಗಳ ಮೂಲಕ ಕಾರಿನ ನೋಂದಣಿ ಸಂಖ್ಯೆಯ ಪ್ಲೇಟ್‌ ಅನ್ನು ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಭಾನುವಾರ ಮಾತನಾಡಿದ ಸಚಿವ ಗಡ್ಕರಿ, ‘ಈ ಸಂಬಂಧ ಮುಖ್ಯವಾದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕಾರಿನ ಉತ್ಪಾದಕರೇ ನಂಬರ್‌ ಅಳವಡಿಸಲಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಕಾರಿನ ಒಟ್ಟು ಬೆಲೆಯಲ್ಲೇ ಸೇರಿಸಲಾಗಿರುತ್ತದೆ. ಇದು ದೇಶದ್ಯಾಂತ ಏಕ ಮಾದರಿಯ ನಂಬರ್‌ಪ್ಲೇಟ್‌ಗೆ ಇದು ಸಹಕಾರಿಯಾಗಲಿದೆ,’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್