ಭರವಸೆ ಈಡೇರಿಸದಿದ್ದರೆ ಚಪ್ಪಲಿ ಹೊಡೆಯಿರಿ: ಅಭ್ಯರ್ಥಿಯ ಮತಬೇಟೆ!

Published : Nov 24, 2018, 01:03 PM IST
ಭರವಸೆ ಈಡೇರಿಸದಿದ್ದರೆ ಚಪ್ಪಲಿ ಹೊಡೆಯಿರಿ: ಅಭ್ಯರ್ಥಿಯ ಮತಬೇಟೆ!

ಸಾರಾಂಶ

ತೆಲಂಗಾಣದಲ್ಲಿ ಜಗ್ತಿಯಾಲ್‌ ಜಿಲ್ಲೆಯ ಕೊರುತ್ಲಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ‘ಒಂದು ವೇಳೆ ಆಯ್ಕೆಯಾದ ಬಳಿಕ ಭರವಸೆ ಈಡೇರಿಸದೇ ಇದ್ದರೆ ಅದೇ ಚಪ್ಪಲಿಯಿಂದ ಹೊಡೆಯಿರಿ’ ಎಂದು ಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. 

ಹೈದರಾಬಾದ್‌[ನ.24]: ಚುನಾವಣೆಯಲ್ಲಿ ಅಭ್ಯರ್ಥಿಗಳು ಜನರಿಗೆ ಹಣ, ಸೀರೆ, ಕುಕ್ಕರ್‌ ಮತ್ತಿತರ ವಸ್ತುಗಳನ್ನು ಹಂಚುವುದು ಸಾಮಾನ್ಯ. ಆದರೆ, ತೆಲಂಗಾಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿ, ‘ಒಂದು ವೇಳೆ ಆಯ್ಕೆಯಾದ ಬಳಿಕ ಭರವಸೆ ಈಡೇರಿಸದೇ ಇದ್ದರೆ ಅದೇ ಚಪ್ಪಲಿಯಿಂದ ಹೊಡೆಯಿರಿ’ ಎಂದು ಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ.

ಜಗ್ತಿಯಾಲ್‌ ಜಿಲ್ಲೆಯ ಕೊರುತ್ಲಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಕುಲಾ ಹನುಮಂತ ಅವರ ಪ್ರಚಾರದ ವಿಡಿಯೋ ಇದೀಗ ವೈರಲ್‌ ಆಗಿದೆ. ಪಾಂಪ್ಲೆಟ್‌ಗಳ ಜತೆಗೆ ಕೈಯಲ್ಲಿ ಸ್ಲಿಪ್ಪರ್‌ ಹಿಡಿದು ಹನುಮಂತ್‌ ಪ್ರಚಾರ ಕೈಗೊಂಡಿದ್ದಾರೆ. ಮತದಾರರ ಕೈಗೆ ಚಪ್ಪಲಿ ಕೊಟ್ಟು ಒಂದು ವೇಳೆ ತಾನು ಹೇಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇದ್ದರೆ ಅದೇ ಚಪ್ಪಲಿಯಿಂದ ಸಾರ್ವಜನಿಕವಾಗಿ ಹೊಡೆಯಿರಿ ಎಂದು ಕೇಳಿಕೊಂಡಿದ್ದಾರೆ.

ಕೊರುತ್ಲಾ ಕ್ಷೇತ್ರದಿಂದ ಟಿಆರ್‌ಎಸ್‌ ಹಿರಿಯ ಮುಖಂಡ ಹಾಗೂ ಶಾಸಕ ವಿದ್ಯಾಸಾಗರ್‌ ರಾವ್‌ ಸ್ಪರ್ಧಿಸಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು