ಭಾರತ ಹಿಂದುಳಿಯಲು ಬಿಮಾರು ರಾಜ್ಯಗಳು ಕಾರಣ: ನೀತಿ ಆಯೋಗ

First Published Apr 25, 2018, 8:31 AM IST
Highlights

ದೇಶದ ಬಿಮಾರು ರಾಜ್ಯ (ರೋಗಗ್ರಸ್ತ) ಗಳಾದ ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು, ದೇಶವನ್ನು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿಯುವಂತೆ ಮಾಡಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

ನವದೆಹಲಿ: ದೇಶದ ಬಿಮಾರು ರಾಜ್ಯ (ರೋಗಗ್ರಸ್ತ) ಗಳಾದ ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು, ದೇಶವನ್ನು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿಯುವಂತೆ ಮಾಡಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂತ್‌, ದೇಶದಲ್ಲಿ ದಕ್ಷಿಣದ ರಾಜ್ಯಗಳು ಉತ್ತಮ ಪ್ರಗತಿ ಸಾಧಿಸುತ್ತಿವೆ. ಆದರೆ ಬಿಮಾರು ರಾಜ್ಯಗಳು ಹಲವು ವಿಷಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸದೇ ಇರುವ ಕಾರಣ, ಒಟ್ಟಾರೆಯಾಗಿ ಭಾರತ ವಿಶ್ವಮಟ್ಟದಲ್ಲಿ ಹಿಂದುಳಿಯುವಂತೆ ಮಾಡಿದೆ.

ಬಿಮಾರು ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಪ್ರಗತಿ ತೋರಿಸಿವೆಯಾದರೂ, ಆದು ಭಾರತವನ್ನು ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಆ ರಾಜ್ಯಗಳು ಹೆಚ್ಚಿನ ಗಮನ ವಹಿಸಬೇಕು ಎಂದು ಹೇಳಿದ್ದಾರೆ. ವಿಶೇಷವೆಂದರೆ ಕಾಂತ್‌ ಉದಾಹರಿಸಿದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಇಲ್ಲವೇ ಅದರ ಮೈತ್ರಿಕೂಟ ಆಡಳಿತ ನಡೆಸುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ 188 ದೇಶಗಳ ಪೈಕಿ ಭಾರತ 131ನೇ ರ್ಯಾಂಕ್ ಪಡೆದಿದೆ.

click me!