ಲಡಾಕ್-ಕಾಶ್ಮೀರ ನಡುವೆ ನಿರ್ಮಾಣವಾಗಲಿದೆ ಅತೀ ದೊಡ್ಡ ಸುರಂಗ ಮಾರ್ಗ

By Suvarna Web DeskFirst Published Jan 3, 2018, 9:41 PM IST
Highlights

ಕಾಶ್ಮೀರ ಮತ್ತು ಲಡಾಕ್ ನಡುವೆ ಎಲ್ಲಾ ಕಾಲವು ಸಂಪರ್ಕ ಕಲ್ಪಿಸುವ ಸುರಂಗ ಯೋಜನೆಗೆ ಇಂದು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ನವದೆಹಲಿ (ಜ.03): ಕಾಶ್ಮೀರ ಮತ್ತು ಲಡಾಕ್ ನಡುವೆ ಎಲ್ಲಾ ಕಾಲವು ಸಂಪರ್ಕ ಕಲ್ಪಿಸುವ ಸುರಂಗ ಯೋಜನೆಗೆ ಇಂದು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಜೋಜಿ ಲಾ ಎನ್ನುವ ಪ್ರದೇಶದಲ್ಲಿ 14.2 ಕಿಮೀ ದೂರ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇದು ಏಷಿಯಾದ ಅತೀ ಉದ್ದದ ಎರಡು ದಿಕ್ಕಿನ ಸುರಂಗ ಮಾರ್ಗವಾಗಿದ್ದು, 6,809 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಮೇ/ ಜೂನ್ ನಲ್ಲಿ ಇದರ ಗುದ್ದಲಿ ಪೂಜೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಬೃಹತ್ ಸುರಂಗ ಮಾರ್ಗ ಯೋಜನೆ ಮುಗಿಯಲು 7 ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಚಳಿಗಾಲಗದ ಸಮಯದಲ್ಲಿ ಭಾರೀ ಹಿಮಪಾತವಾಗುವ ಕಾರಣ ಲಡಾಕ್ ಭಾಗವು ಬೇರೆ ಬೇರೆ ಭಾಗಗಳಿಂದ ಸಂಪರ್ಕವನ್ನು ಕಳೆದುಕೊಂಡಿರುತ್ತದೆ. ಈ ಸುರಂಗ ಮಾರ್ಗವು ಲಡಾಕ್'ಗೆ ಎಲ್ಲಾ ಕಾಲದಲ್ಲಿಯೂ ಬೇರೆ ಬೇರೆ ಪ್ರದೇಶಗಳ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ ಜೊತೆಗೆ ಸೇನೆಗೂ ಸಹ ಬಲವನ್ನು ತುಂಬುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

click me!