
ಹೊಸದಿಲ್ಲಿ (ನ.23): 7 ನೇ ವೇತನ ಆಯೋಗದ ವೇತನ ಶ್ರೇಣಿಯ ಅನುಗುಣವಾಗಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡಿಸಿ ವೇತನ ಹೆಚ್ಚಳ ಪ್ರಸ್ತಾವಕ್ಕೆ ಅನುಮೋದನೆ ಪಡೆದುಕೊಳ್ಳಲು ಉದ್ದೇಶಿಸಲಾಗಿದೆ. 2018ರಲ್ಲೇ ಈ ಸಂಬಂಧ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ.ಟಿ.ಎಸ್. ಠಾಕೂರ್ ಅವರು ಪ್ರಸ್ತಾವ ಕಳಿಸಿದ್ದರು. ಭಾರತದ ಮುಖ್ಯ ನ್ಯಾಯಾಧೀಶರ ತಿಂಗಳ ವೇತನವನ್ನು ಮಾಸಿಕ 3 ಲಕ್ಷ ರು.ಗೆ ಹೆಚ್ಚಿಸಬೇಕು ಎಂದು ಮೂವರು ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿತ್ತು.
ಇದನ್ನು ಪರಿಶೀಲಿಸಿರುವ ಸರ್ಕಾರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವೇತನವನ್ನು ಮಾಸಿಕ 2.80 ಲಕ್ಷ ರು.ಗೆ, ಸುಪ್ರೀಂ ಕೋರ್ಟ್ ಜಡ್ಜ್‌ಗಳ ವೇತನ 2.5 ಲಕ್ಷ ರು.ಗೆ, ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರ ಸಂಬಳ 2.5 ಲಕ್ಷ ರು.ಗೆ, ಹೈಕೋರ್ಟ್ ನ್ಯಾಯಾಧೀಶರ ವೇತನ 2.25 ಲಕ್ಷ ರು.ಗೆ ಹೆಚ್ಚಿಸಲು ಸಮ್ಮತಿಸಿದೆ.
2016 ಜನವರಿ 1ರಿಂದ ಹೆಚ್ಚಳವು ಪೂರ್ವಾನ್ವಯವಾಗ ಲಿದ್ದು, ಹಿಂಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿಸಲಾ ಗುತ್ತದೆ. ವೇತನ ಹೆಚ್ಚಳವು ಸುಪ್ರೀಂ ಕೋರ್ಟ್‌ನ 31 ನ್ಯಾಯಾಧೀಶರು ಹಾಗೂ 1079 ಹೈಕೋರ್ಟ್ ನ್ಯಾಯಾಧೀಶರಿಗೆ ಅನುಕೂಲ ಕಲ್ಪಿಸಲಿದೆ. 2500 ನಿವೃತ್ತ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಜಡ್ಜ್‌ಗಳಿಗೂ ಇದರಿಂದ ಅನುಕೂಲವಾಗಲಿದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರದ ಅತ್ಯುಚ್ಚ ಅಧಿಕಾರಿಗಳ ಶ್ರೇಣಿಯಲ್ಲೇ ಈ ನ್ಯಾಯಾಧೀಶರು ಸಂಬಳ ಪಡೆಯಲಿದ್ದಾರೆ.
ಈ ಹಿಂದೆ ಎಷ್ಟಿತ್ತು?: ಈಗ ಹಾಲಿ ಸುಪ್ರೀಂ ಕೋರ್ಟ್'ನ್ಯಾಯಾಧೀಶರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಎಲ್ಲ ಕಡಿತಗಳನ್ನು ಹೊರತುಪಡಿಸಿ ಮಾಸಿಕ 1.5 ಲಕ್ಷ ರು. ವೇತನ ಪಡೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಇದಕ್ಕಿಂತ ಸ್ವಲ್ಪ ಹೆಚ್ಚು ಹಾಗೂ ಹೈಕೋರ್ಟ್ ನ್ಯಾಯಾಧೀಶರಿಗೆ ಇದಕ್ಕಿಂತ ಕೊಂಚ ಕಡಿಮೆ ವೇತನವಿದೆ. ಜತೆಗೆ ಬಾಡಿಗೆ ರಹಿತ ವಾಸಕ್ಕೆ ಅವಕಾಶ ಕೊಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.