
ನವದೆಹಲಿ[ಮೇ.31]: ಕರ್ನಾಟಕದ ಒಂದು ಮುಂದೂಡಿಕೆ ಕ್ಷೇತ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ 14 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಹಿನ್ನಡೆಯಾಗಿದೆ.
4 ಲೋಕಸಭಾ, 10 ವಿಧಾನಸಭಾ ಸ್ಥಾನಗಳಲ್ಲಿ ಕೇಂದ್ರದ ಆಡಳಿದ ಪಕ್ಷ ಬಿಜೆಪಿ ಒಂದು ಲೋಕಸಭೆ ಹಾಗೂ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದೆ. ಉಳಿದ 12 ವಿರೋಧ ಪಕ್ಷದ ಪಾಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಉತ್ತರ ಪ್ರದೇಶದ ಕೈರಾನಾದಲ್ಲಿ ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರದ ಬಂಡಾರಾ-ಗೋಡಿಯಾದಲ್ಲಿ ಎನ್'ಸಿಪಿ ಜಯದ ಪತಾಕೆ ಹಾರಿಸಿದ್ದು, ನಾಗಲ್ಯಾಂಡ್ ಏಕೈಕ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಕೂಟ ಪಕ್ಷ ಮುನ್ನಡೆ ಸಾಧಿಸಿವೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಒಂದೇ ಸ್ಥಾನ
ಕರ್ನಾಟಕದ ಒಂದು ಮುಂದೂಡಿಕೆ ವಿಧಾನಸಭಾ ಸ್ಥಾನ ಒಳಗೊಂಡು ವಿವಿಧ ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಉತ್ತರಖಂಡ್'ನ ತರಾಲಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 9 ಕ್ಷೇತ್ರಗಳಲ್ಲಿ ಪರಾಭವಗೊಂಡಿದೆ. ಕರ್ನಾಟಕದ ರಾಜರಾಜೇಶ್ವರಿ ನಗರ, ಪಂಜಾಬಿನ ಶಾಕೋಟ್, ಮೇಘಾಲಯದ ಅಪಾಟಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.
ಉತ್ತರ ಪ್ರದೇಶ ನೂರ್'ಪುರ್'ನಲ್ಲಿ ಸಮಾಜವಾದಿ ಪಕ್ಷ, ಕೇರಳದ ಚಂಗನೂರ್'ನಲ್ಲಿ ಸಿಪಿಎಂ, ಜಾರ್ಖಂಡ್ 2 ವಿದಾನಸಭಾ ಕ್ಷೇತ್ರಗಳು ಜೆಎಂಎಂ ಜಯಗಳಿಸಿದೆ. ಬಿಹಾರದ ಜೋಕಿಹಾಟ್'ನಲ್ಲಿ ಆರ್'ಜೆಡಿ ಪಶ್ಚಿಮ ಬಂಗಳದ ಮಹೀಸ್ಥಳದಲ್ಲಿ ಆಡಳಿತ ಪಕ್ಷ ಟಿಎಂಸಿ ಗೆಲುವಿನ ನಗೆ ಬೀರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.