ಸಿಎಂ ಕಾರು ಅಡ್ಡಹಾಕಿ ಪ್ರಸಾದ ಕೊಟ್ಟ ರೇವಣ್ಣ!

Published : Jul 19, 2019, 08:15 AM IST
ಸಿಎಂ ಕಾರು ಅಡ್ಡಹಾಕಿ ಪ್ರಸಾದ ಕೊಟ್ಟ ರೇವಣ್ಣ!

ಸಾರಾಂಶ

ವಿಶ್ವಾಸಮತ ಯಾಚನೆಗಾಗಿ ವಿಧಾನಸೌಧಕ್ಕೆ ಹೊರಟಿದ್ದ ಕುಮಾರಸ್ವಾಮಿ| ಸಿಎಂ ಕಾರು ಅಡ್ಡಹಾಕಿ ಪ್ರಸಾದ ಕೊಟ್ಟ ರೇವಣ್ಣ! 

ಬೆಂಗಳೂರು[ಜು.19]: ದೈವ, ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಗುರುವಾರ ವಿಶ್ವಾಸಮತ ಯಾಚನೆಗಾಗಿ ವಿಧಾನಸೌಧಕ್ಕೆ ಹೊರಟಿದ್ದ ತಮ್ಮ ಸಹೋದರ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕಾರನ್ನು ರಸ್ತೆಯಲ್ಲೇ ತಡೆದು ದೇವರ ಪ್ರಸಾದ ಕೊಟ್ಟಪ್ರಸಂಗ ನಡೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೂ ಮುನ್ನ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಪದ್ಮನಾಭನಗರ ಮನೆಗೆ ತೆರಳಿದ್ದರು. ದೇವೇಗೌಡ ಅವರ ಭೇಟಿ ಬಳಿಕ ಕೆಲ ನಿಮಿಷ ಚರ್ಚೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡ ನಂತರ ವಿಧಾನಸೌಧದತ್ತ ಬೆಂಗಾವಲಿನ ಮಧ್ಯೆ ಕಾರಿನಲ್ಲಿ ಹೊರಟಿದ್ದರು.

ದೇವೇಗೌಡರ ನಿವಾಸದ ಮುಖ್ಯರಸ್ತೆಯಲ್ಲಿ ಬಂದ ರೇವಣ್ಣ ಅವರು ಕಾರು ನಿಲ್ಲಿಸುವಂತೆ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಗೆ ಕೈಸನ್ನೆ ಮೂಲಕ ಸೂಚಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ತಮ್ಮ ಕಾರು ನಿಲ್ಲಿಸಿದ್ದರು. ನಂತರ ಕುಮಾರಸ್ವಾಮಿ ಅವರ ಕಾರಿನ ಬಳಿ ಬಂದ ರೇವಣ್ಣ, ದೇವರ ಪೂಜೆ ಮಾಡಿಸಿ ತಂದಿದ್ದ ಪ್ರಸಾದವನ್ನು ಸಹೋದರನಿಗೆ ರಸ್ತೆಯಲ್ಲಿ ನೀಡಿದರು. ಪ್ರಸಾದ ಪಡೆದ ಕುಮಾರಸ್ವಾಮಿ ಬಳಿಕ ವಿಧಾನಸೌಧಕ್ಕೆ ತೆರಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು