40 ಅಡಿ ಕಂದಕಕ್ಕೆ ಉರುಳಿ ಭೀಕರ ಬಸ್ ಅಪಘಾತ : 29 ಮಂದಿ ದುರ್ಮರಣ

By Web Desk  |  First Published Jul 8, 2019, 11:18 AM IST

40 ಅಡಿ ಕಂದಕಕ್ಕೆ ಉರುಳಿ  ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 29 ಮಂದಿ ದುರ್ಮರಣವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 


ನವದೆಹಲಿ [ಜು.08] :  ಆಗ್ರಾ ಬಳಿಯ ಯಮುನಾ ಎಕ್ಸ್ ಪ್ರೆಸ್  ವೇ ನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 29 ಮಂದಿ ಸಾವಿಗೀಡಾಗಿದ್ದಾರೆ. 10 ಕ್ಕೂ ಹೆಚ್ಚು ಮಂದಿ  ಗಂಭೀರವಾಗಿ ಗಾಯಗೊಂಡಿದ್ದಾರೆ. 

ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ 40 ಅಡಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಚಾಲಕ ನಿದ್ದೆಯಲ್ಲಿ ಬಸ್ ಚಾಲನೆ ಮಾಡಿದ್ದು ಈ ದುರ್ಘಟನೆಗೆ ಕಾರಣವಾಗಿದೆ. 

Tap to resize

Latest Videos

ಉತ್ತರ ಪ್ರದೇಶದಲ್ಲಿ ಲಕ್ನೋಗೆ ತೆರಳುತ್ತಿದ್ದ ವೇಳೆ ಮುಂಜಾನೆ 4 .30ರ ಸುಮಾರಿಗೆ  ಬಸ್ ಡಿವೈಡರ್ ಗೆ ಡಿಕ್ಕಿಯಾಗಿ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಮುಂಜಾನೆಯ ಸವಿ ನಿದ್ದೆಯಲ್ಲಿ ಇದ್ದವರಿಗೆ ಮಾರ್ಗಮಧ್ಯ ಕಾದಿದ್ದ ಸಾವು ಅಪಘಾತ ರೂಪದಲ್ಲಿ ಅಪ್ಪಳಿಸಿದೆ.

ಘಟನೆ ಬಗ್ಗೆ ಉತ್ತರ ಪ್ರದೇಶ ಸಿಎಂ ಸಂತಾಪ ಸೂಚಿಸಿದ್ದು, ಮೃತರ ಕಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದಾರೆ. 
 

click me!