
ತೀರ್ಥಹಳ್ಳಿ (ಜೂ.27): ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಹೊಗುತ್ತಿದ್ದ ಕ್ರಿಸ್ತರಾಜ್ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿದೆ. ಇನ್ನೇನು ಕ್ಷಣಾರ್ಧದಲ್ಲಿ ಹೊಳೆಯ ಕಡೆ ಸಾಗಿ ತುಂಗಾ ನದಿ ಪಾಲಾಗಬೇಕೆನ್ನುವಸ್ಟರಲ್ಲಿ ಅದೇ ಬಸ್ಸಿನ ಕಂಡಕ್ಟರ್ ಕೂಡಲೇ ಸ್ಟೇರಿಂಗ್ ಹಿಡಿದು ತಿರುಗಿಸಿ ಬಸ್ಸನ್ನು ರಸ್ತೆಯತ್ತ ಮುಖ ಮಾಡುವ ಹಾಗೆ ಮಾಡಿದ್ದಾರೆ. . ಅಷ್ಟೊತ್ತಿಗಾಗಲೇ ಗಾಬರಿಗೊಂಡ ಕೆಲ ಪ್ರಯಾಣಿಕರು ಹಾರಲು ಹೋಗಿ ಮೈ ಕೈ ಗಾಯ ಮಾಡಿಕೊಂಡಿದ್ದಾರೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದರು.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಪ್ರಯಾಣಿಕರ ಪ್ರಾಣ ಉಳಿಸಿದ ಕಂಡಕ್ಟರ್ ಭಗವಾನ್ ಪ್ರಯಾಣಿಕರ ಪಾಲಿನ ಭಗವಂತನಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.