ಕೇಂದ್ರದ ಬಜೆಟ್’ನಲ್ಲಿ ಹಿರಿಯರು – ವಿಧವೆಯರ ಪಿಂಚಣಿ ಏರಿಕೆ..?

By Suvarna Web DeskFirst Published Jan 25, 2018, 8:45 AM IST
Highlights

ಫೆಬ್ರವರಿ 1ರಂದು ನಡೆಯಲಿರುವ ಕೇಂದ್ರ ಸರ್ಕಾರದ ಬಜೆಟ್ ಸಮೀಪಿಸುತ್ತಿದ್ದಂತೆಯೇ ಏನೇನು ಆಗಬಹುದು ಎಂಬ ನಿರೀಕ್ಷೆಗಳ ಪಟ್ಟಿ ಹೊರಬರತೊಡಗಿವೆ. ಹಣಕಾಸು ಸಚಿವಾಲಯವು ಹಿರಿಯರು ಹಾಗೂ ವಿಧವೆಯರಿಗೆ ಮಾಸಿಕ 1000 ರು. ಪಿಂಚಣಿ ಘೋಷಿಸುವ ಸಾಧ್ಯತೆ ಇದೆ.

ನವದೆಹಲಿ: ಫೆಬ್ರವರಿ 1ರಂದು ನಡೆಯಲಿರುವ ಕೇಂದ್ರ ಸರ್ಕಾರದ ಬಜೆಟ್ ಸಮೀಪಿಸುತ್ತಿದ್ದಂತೆಯೇ ಏನೇನು ಆಗಬಹುದು ಎಂಬ ನಿರೀಕ್ಷೆಗಳ ಪಟ್ಟಿ ಹೊರಬರತೊಡಗಿವೆ. ಹಣಕಾಸು ಸಚಿವಾಲಯವು ಹಿರಿಯರು ಹಾಗೂ ವಿಧವೆಯರಿಗೆ ಮಾಸಿಕ 1000 ರು. ಪಿಂಚಣಿ ಘೋಷಿಸುವ ಸಾಧ್ಯತೆ ಇದೆ.

ಈಗ ಮಾಸಿಕ 200 ರು. ಪಿಂಚಣಿ ಲಭ್ಯ ಇದೆ. ಇದು ಯಾವುದಕ್ಕೂ ಸಾಲದು. ಹೀಗಾಗಿ ಕನಿಷ್ಠ 500 ರು. ಹಾಗೂ 1000 ರು.ಗೆ ಪಿಂಚಣಿ ಏರಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ಹೇಳಿವೆ.200 ರು. ಪಿಂಚಣಿ ಜಾರಿಗೆ ಬಂದು 12 ವರ್ಷವಾಗಿದ್ದು, ಈವರೆಗೂ ನಯಾ ಪೈಸೆ ಏರಿಕೆಯಾಗಿಲ್ಲ.

click me!