
ಬೆಂಗಳೂರು(ಜು.23): ಸಿದ್ದರಾಮಯ್ಯನವರೇ, ಹಿಂದುಳಿದ ವರ್ಗಗಳು ಅಂದರೆ ಒಂದೆರಡು ಸಮಾಜವಷ್ಟೇ ಅಲ್ಲ, ರಾಜನ ಸ್ಥಾನದಲ್ಲಿ ಕುಳಿತಿರುವ ನೀವು ಎಲ್ಲ ಸಮಾಜದವರಿಗೂ ನ್ಯಾಯ ಕೊಡಿ - ಹೀಗೆ ನೇರವಾಗಿ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ವಿಶ್ವಕರ್ಮ ಸಮಾಜದ ವತಿಯಿಂದ ನೀಡಿದ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ನಂಜುಂಡಿಯವರೇ ಒಟ್ಟಾಗಿ ಪಕ್ಷ ಕಟ್ಟೋಣ ಬನ್ನಿ, ಪಕ್ಷವನ್ನ ಅಧಿಕಾರಕ್ಕೆ ತರೋಣ, ನಿಮಗೆ ಹಿಂದುಳಿದ ವರ್ಗಗಳ ಜವಾಬ್ದಾರಿ ನೀಡುತ್ತೇನೆ ಅಂತ ಭರವಸೆ ನೀಡಿದರು. ನಾನು ಭರವಸೆ ಕೊಡೋಲ್ಲ, ಕೊಟ್ಟ ಮೇಲೆ ತಪ್ಪೊಲ್ಲ ಎಂದ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಭೇಟಿ ವೇಳೆ ನಂಜುಂಡಿ ಅವರಿಗೆ ಅಮಿತ್ ಷಾ ಅವರಿಂದಲೇ ಸನ್ಮಾನ ಮಾಡಿಸೋದಾಗಿ ಹೇಳಿದರು. ಇದೇ ವೇಳೆ ಮಾತನಾಡಿದ ವಿಶ್ವಕರ್ಮ ಸಮುದಾಯದ ಕಾಳಹಸ್ತೇಂದ್ರ ಸ್ವಾಮೀಜಿ, 16 ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರೂ ಸಿದ್ದರಾಮಯ್ಯ ವಿಶ್ವಕರ್ಮ ಸಮುದಾಯಕ್ಕೆ ಏನೂ ಮಾಡಲಿಲ್ಲ, ಅಂತ ಸ್ವಾಮೀಜಿ ಹೇಳಿದರು. ಕಾಂಗ್ರೆಸ್ ಸರ್ಕಾರ ಇರುವವರೆಗೂ ಕಾವಿ ಬಟ್ಟೆಗೆ ಬೆಲೆ ಇಲ್ಲ ಎಂದ ಕಾಳಹಸ್ತೇಂದ್ರ ಸ್ವಾಮೀಜಿ, ಕಾವಿಗೆ ಇನ್ನೊಂದು ಅರ್ಥವೇ ಯಡಿಯೂರಪ್ಪ, ಕೇಸರಿ ಪಡೆಗೆ ಇನ್ನೊಂದು ಹೆಸರೇ ಯಡಿಯೂರಪ್ಪ. ಕೆ.ಪಿ. ನಂಜುಂಡಿ ನಮಗೆ ರಾಜಕೀಯ ಮಾಡೋದು ಕಲಿಸಿದ್ದಾರೆ. ರಾಜಕೀಯ ಮಾಡೋದಾದರೆ ಎಂದೋ ಮಾಡಬಹುದಿತ್ತು. ಆದರೆ ರಾಜಕೀಯ ಮಾಡಬೇಕಾದ ಅಗತ್ಯ ನಮಗೆ ಇರಲಿಲ್ಲ. ನಾವು ಕೇಳಿದ್ದು ಕೇವಲ ಒಂದು ಎಂಎಲ್ಸಿ ಸ್ಥಾನವನ್ನ. ಆದರೆ ಅದನ್ನ ನೀಡದೇ ಸಿದ್ದರಾಮಯ್ಯ ತಮಗೆ ತಾವೇ ಅವಮಾನಿಸಿಕೊಂಡಿದ್ದಾರೆ ಅಂತ ಕಾಳಹಸ್ತೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಕೆಪಿ ನಂಜುಂಡಿ, ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರೇ ಅಲ್ಲ ಅಂತ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.