ಬೆಳ್ಳಂದೂರು ಕೆರೆ ಕಾಮಗಾರಿ ಹೆಸರಿನಲ್ಲಿ ಕಾಲ ಹರಣ ಮಾಡುತ್ತಿದೆ ಬಿಡಿಎ

Published : Jul 23, 2017, 07:59 PM ISTUpdated : Apr 11, 2018, 12:40 PM IST
ಬೆಳ್ಳಂದೂರು ಕೆರೆ ಕಾಮಗಾರಿ ಹೆಸರಿನಲ್ಲಿ ಕಾಲ ಹರಣ ಮಾಡುತ್ತಿದೆ ಬಿಡಿಎ

ಸಾರಾಂಶ

ಮಲಿನಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹೆಜ್ಜೆ ಇಟ್ಟಿದ್ದು, ಕೆರೆ ಸುತ್ತಮುತ್ತಲಿನ ಜನರಲ್ಲಿ ಖುಷಿ ತಂದಿತ್ತು. ಆದರೆ ಕಳೆದ ಎರಡು ತಿಂಗಳಿಂದ ಬಿಡಿಎ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕಾಮಗಾರಿ ಹೆಸರಿನಲ್ಲಿ  ಬಿಡಿಎ ಕಾಲ ಹರಣ ಮಾಡುತ್ತಿದೆ.

ಬೆಂಗಳೂರು (ಜು.23): ಮಲಿನಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹೆಜ್ಜೆ ಇಟ್ಟಿದ್ದು, ಕೆರೆ ಸುತ್ತಮುತ್ತಲಿನ ಜನರಲ್ಲಿ ಖುಷಿ ತಂದಿತ್ತು. ಆದರೆ ಕಳೆದ ಎರಡು ತಿಂಗಳಿಂದ ಬಿಡಿಎ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕಾಮಗಾರಿ ಹೆಸರಿನಲ್ಲಿ  ಬಿಡಿಎ ಕಾಲ ಹರಣ ಮಾಡುತ್ತಿದೆ.

ಬೆಳ್ಳಂದೂರು ಕೆರೆ ಸ್ವಚ್ಛತೆ ವಿಚಾರವಾಗಿ ಹಸಿರು ನ್ಯಾಯಾಧಿಕರಣ, ಬಿಡಿಎ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಬೆಂಡ್​ ಎತ್ತಿತ್ತು.  ಇದರಿಂದ ಎಚ್ಚೆತ್ತ ಬಿಡಿಎ, ಬೆಳ್ಳಂದೂರು ಕೆರೆಯ ಪುನರುಜ್ಜೀವನಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿತ್ತು. ಮೂರು ತಿಂಗಳ ಕಾಲಾವಕಾಶವನ್ನು  ಪಡೆದುಕೊಂಡಿತ್ತು. ಆದರೆ ಕಾಮಗಾರಿ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಬೆಳ್ಳಂದೂರು ಕೆರೆಯ ಕಳೆ ತೆಗೆಯುವ ಕೆಲಸವೇ ಮುಗಿದಿಲ್ಲ. ಕೆರೆಯಲ್ಲಿ ಇದ್ದ ಕೊಳೆ ಮತ್ತು ನೊರೆ ಮೊದಲಿನಂತೆಯೇ ಇದೆ.

ಬೆಳ್ಳಂದೂರು ಕೆರೆಯ ಪುನರುಜ್ಜೀವನದ ಮುಖ್ಯ ಉದ್ದೇಶ, ಕೆರೆಯನ್ನ ಸಹಜ ಸ್ಥಿತಿಗೆ ಮರಳಿಸುವುದು. ಕೆರೆಯಲ್ಲಿರುವ ಜೈವಿಕ ಸಂಕುಲಗಳ ಸಂರಕ್ಷಣೆ ಮಾಡಲು,ಕೆರೆಯಲ್ಲಿ ಆಮ್ಲಜನಕದ ಪ್ರಮಾಣ  ಹೆಚ್ಚಿಸುವುದು. ಹಾಗೂ ಕೆರೆಯ ಪರಿಸರವನ್ನು ಸುಂದರಗೊಳಿಸುವುದು ಮತ್ತು ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಎರಡು ತಿಂಗಳಿಂದ ಇದ್ಯಾವ​ ಕೆಲಸಗಳು ಬೆಳ್ಳಂದೂರು ಕೆರೆಯಲ್ಲಿ ನಡೆಯುತ್ತಿಲ್ಲ.

ಕೆರೆಯ ಕಳೆ ತೆಗೆಯುವ ಟೆಂಡರ್​ನ ಪಡೆದಿರುವ ಹೈದರಾಬಾದ್​ನ  ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಆಮೆ ವೇಗದಲ್ಲಿ ಕೆಲಸ ಮಾಡುತ್ತಿದೆ. ಶೇ.20 ರಷ್ಟು ಮಾತ್ರ ಕೆರೆಯ ಕಳೆ ತೆಗೆಯಲಾಗಿದೆ. ಇನ್ನು  ಕೆರೆಗೆ ಯಾರು ಕಸ ಹಾಕುತ್ತಾರೋ ಅವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಕೆರೆಯ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನ ಅಳವಡಿಸಿತ್ತು.. ಆದರೆ ಬಿಬಿಎಂಪಿಯ ಯಾವುದೇ ಕ್ಯಾಮರಾಗಳು  ವರ್ಕ್​ ಆಗುತ್ತಿಲ್ಲ. ಇನ್ನೂ ಕೆಲ ಕ್ಯಾಮರಾಗಳು ಕೆರೆ ಪಕ್ಕದಲ್ಲಿರುವ ಅರ್ಪಾಟಮೆಂಟ್​ನ ಕಾಯುತ್ತಿವೆ. ಇದರಿಂದ ಕೆರೆಯಲ್ಲಿ ಕಸ ಹಾಕುವ ಜನರಿಗೆ ಮುಕ್ತ ಆಹ್ವಾನ ನೀಡಿದಂತಾಗಿದೆ.

ಒಟ್ಟಿನಲ್ಲಿ, ಬಿಡಿಎ ಕೆರೆಯ ಕಳೆ ತೆಗೆಯುವ ಕೆಲಸವನ್ನೇ ಒಂದು ವರ್ಷ ಪಡೆಯುವ ಯೋಚನೆಯಲ್ಲಿದೆ ಅನ್ನುವ ಅನುಮಾನ ಶುರುವಾಗಿದೆ. ನ್ಯಾಯಾಧಿಕರಣದ ಒತ್ತಡಕ್ಕೆ ಬಿಡಿಎ ಬೇಜವಾಬ್ದಾರಿ ಕೆಲಸ ಮಾಡುತ್ತಿರುವುದಂತೂ ನಿಜ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋಡಗಳ ಮೇಲೊಂದು ಅತಿ ಸುಂದರವಾದ ರೈಲು ನಿಲ್ದಾಣ: ಆಕ್ಸಿಜನ್ ಮಾಸ್ಕ್ ಕಡ್ಡಾಯ
ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150