'ಬಿಎಸ್'ವೈ, ಪರ್ರಿಕರ್ ನಾಟಕ - ಅಮಿತ್ ಶಾ ನಿರ್ದೇಶನ '

Published : Dec 26, 2017, 09:13 AM ISTUpdated : Apr 11, 2018, 12:54 PM IST
'ಬಿಎಸ್'ವೈ, ಪರ್ರಿಕರ್ ನಾಟಕ - ಅಮಿತ್ ಶಾ ನಿರ್ದೇಶನ '

ಸಾರಾಂಶ

ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಪಾತ್ರಧಾರಿಗಳು. ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಹುಬ್ಬಳ್ಳಿ (ಡಿ.26): ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಪಾತ್ರಧಾರಿಗಳು. ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸೋಮವಾರ ಗದಗ ಸಮಾವೇಶ ಹಾಗೂ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ಪ್ರಸ್ತಾಪಿಸಿದ ಅವರು, ನಾನು 3 ಬಾರಿ ಪತ್ರ ಬರೆದರೂ ಉತ್ತರ ಕೊಡದ ಪರ್ರಿಕ್ಕರ್ ಈಗ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ನಾಟಕ ಮಾಡಿದ್ದಾರೆ.

ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಅಮಿತ್ ಶಾ ಅವರದ್ದು, ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಪಾತ್ರಧಾರಿ ಗಳಾಗಿದ್ದಾರೆ. ಮಹಾದಾಯಿ ವಿಚಾರದಲ್ಲಿ ಬಹಳ ಚೆನ್ನಾಗಿ ಸ್ಕ್ರಿಪ್ಟ್ ಮಾಡಿ ನಾಟಕ ಹೆಣೆದಿದ್ದಾರೆ. ಜನ ಈಗಾಗಲೇ ಅವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದು, ಅವರಿಗೆ ಜನರೇ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಲೇವಡಿ ಮಾಡಿದರು.

ಪರ್ರಿಕರ್‌ಗೆ ಸವಾಲು: ಇದೇ ವೇಳೆ ಪರ್ರಿಕರ್'ಗೆ ಸವಾಲು ಹಾಕಿದ ಸಿದ್ದರಾಮಯ್ಯ, ಮಹದಾಯಿ ನೀರು ಬಿಡಲು ಅವರು ಒಪ್ಪಿದ್ದೇ ನಿಜವಾದರೆ ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಹೇಳಿದರು. ಗೋವಾ ಸಿಎಂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.

ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿಯಾದ ನನಗೆ ಪತ್ರ ಬರೆಯಬೇಕಿತ್ತು. ಆದರೆ ಅದನ್ನು ಅವರ ಪಕ್ಷದ ರಾಜ್ಯಾಧ್ಯಕ್ಷರಿಗೆ ಬರೆದಿದ್ದಾರೆ. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರವನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಲು ಅವಕಾಶವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಬ್ಬ ಪಕ್ಷದ ಅಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಸಲ್ಲಿಸಲು ಕಾನೂನಲ್ಲಿ ಅವಕಾಶವಿಲ್ಲ ಎಂದರು.

ಶೆಟ್ಟರ್‌ಗೇನು ಗೊತ್ತು ಕಾನೂನು?: ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ನಾನು ವಕೀಲಗಿರಿ ಮಾಡಿದವ. ಯಡಿಯೂರಪ್ಪ, ಶೆಟ್ಟರ್‌ಗೇನು ಗೊತ್ತು ಕಾನೂನು. ಶೆಟ್ಟರ್ ಕಾನೂನು ಪದವಿ ಪಡೆದಿದ್ದರೂ ವಕೀಲಗಿರಿ ಮಾಡಿಲ್ಲ. ಬೇರೆ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರ ನ್ಯಾಯಾಧಿಕರಣದಲ್ಲಿ ಊರ್ಜಿತವಾಗಲ್ಲ ಎಂದರು.

ಮಹದಾಯಿ ಸಮಸ್ಯೆ ಪರಿಹಾರ ವಿಷಯವಾಗಿ ಈಗಾಗಲೇ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಸ್ಥಳ, ದಿನಾಂಕ ಅವರೇ ನಿಗದಿ ಮಾಡ್ಲಿ, ಎಲ್ಲಿಗೆ ಕರೆದ್ರೂ ನಾನು ಹೋಗಲು ಸಿದ್ಧ ಎಂದು ಹೇಳಿದ್ದೇನೆ. ಚೆಂಡು ಮತ್ತೆ ನಿಮ್ಮ ಅಂಗಳದಲ್ಲೇ ಇದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಗಳ್ಳತನಕ್ಕೆ ಕೆಪಿಸಿಸಿ-ಬಿಎಲ್‌ಎಗಳ ಲೋಪವೇ ಕಾರಣ: ರಾಹುಲ್ ಗಾಂಧಿಗೆ ಕೆ.ಎನ್.ರಾಜಣ್ಣ ಸುದೀರ್ಘ ಪತ್ರ
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಗರ್‌ಹುಕುಂ ಸಭೆ ಬಳಿಕ ಪ್ರದೀಪ್ ಈಶ್ವರ್ ಸ್ಪಷ್ಟನೆ