ವರ್ಷಾರಂಭದಲ್ಲೇ ಬಿಎಸ್ಎನ್ಎಲ್ ಟೆಲಿಕಾಂನಿಂದ ಗ್ರಾಹಕರಿಗೆ ಶಾಕ್..!

By Suvarna Web DeskFirst Published Jan 3, 2018, 7:54 AM IST
Highlights

 ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್, ಲ್ಯಾಂಡ್‌ಲೈನ್ ಫೋನ್ ಗಳಿಗೆ ಇದ್ದ ರಾತ್ರಿ ಉಚಿತ ಕರೆ ಸೌಲಭ್ಯದ ಅವಧಿಯನ್ನು ಎರಡೂವರೆ ತಾಸು ಕಡಿತಗೊಳಿಸಿ ಗ್ರಾಹಕರಿಗೆ ವರ್ಷದ ಮೊದಲ ದಿನವೇ ಶಾಕ್ ನೀಡಿದೆ.

ನವದೆಹಲಿ: ವರ್ಷಾಂತ್ಯ ಹಾಗೂ ಹೊಸ ವರ್ಷದ ಆರಂಭದ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಖಾಸಗಿ ಕಂಪನಿಗಳು ಬಗೆಬಗೆಯ ಆಫರ್‌ಗಳನ್ನು ನೀಡುತ್ತವೆ. ಆದರೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್, ಲ್ಯಾಂಡ್‌ಲೈನ್ ಫೋನ್ ಗಳಿಗೆ ಇದ್ದ ರಾತ್ರಿ ಉಚಿತ ಕರೆ ಸೌಲಭ್ಯದ ಅವಧಿಯನ್ನು ಎರಡೂವರೆ ತಾಸು ಕಡಿತಗೊಳಿಸಿ ಗ್ರಾಹಕರಿಗೆ ವರ್ಷದ ಮೊದಲ ದಿನವೇ ಶಾಕ್ ನೀಡಿದೆ.

ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ರಾತ್ರಿ 9ರಿಂದ ಬೆಳಗ್ಗೆ 7ರವರೆಗೆ ಸ್ಥಿರ ದೂರವಾಣಿ ಮೂಲಕ ದೇಶಾದ್ಯಂತ ಉಚಿತ ಕರೆ ಸೌಲಭ್ಯವನ್ನು ಬಿಎಸ್ ಎನ್‌ಎಲ್ ಒದಗಿಸುತ್ತಿತ್ತು. ಆದರೆ ಈಗ ಏಕಾಏಕಿ ಜ.1 ರಿಂದ ಜಾರಿಗೆ ಬರುವಂತೆ ಉಚಿತ ಕರೆ ಅವಧಿಯನ್ನು ರಾತ್ರಿ 10.30ರಿಂದ ಬೆಳಗ್ಗೆ 6ರವರೆಗೆ ಸೀಮಿತಗೊಳಿಸಿದೆ. ಭಾನುವಾರ ದಿನವಿಡೀ ಉಚಿತ ಕರೆ ಸೌಲಭ್ಯ ಮುಂದುವರಿದಿದೆ. ಆದರೆ, ಹಿಮಾಚಲಪ್ರದೇಶ ಟೆಲಿಕಾಂ ವೃತ್ತದಲ್ಲಿ ಆ ಸೇವೆಯನ್ನು ರದ್ದುಗೊಳಿಸಿರುವುದರಿಂದ, ಮುಂಬರುವ ದಿನಗಳಲ್ಲಿ ಅದೇ ನೀತಿ ದೇಶಾದ್ಯಂತ ಅನ್ವಯವಾದರೂ ಅಚ್ಚರಿ ಇಲ್ಲ.

click me!