ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನ ಮಾಡುವಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದು, ಒಗ್ಗಟ್ಟಿನ ರಣಕಹಳೆ ಮೊಳಗಿಸಿದೆ
ಬಾಗಲಕೋಟೆ,(ಅ.17): ಜಮಖಂಡಿ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನ ಮಾಡುವಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇಂದು [ಬುಧವಾರ] ನಡೆದ ಮುರಿಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ನಿರ್ಣಯ ಕೈಗೊಂಡಿದ್ದಾರೆ.
ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?
2018ರ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸಂಗಮೇಶ್ ನಿರಾಣಿ ಸ್ಪರ್ಧಿಸಿದ್ದರು. ಇದ್ರಿಂದ ಸಂಗಮೇಶ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತ್ ಮಾಡಲಾಗಿತ್ತು.
ಆದ್ರೆ, ಈಗ ಎದುರಾಗಿರುವ ಉಪಚುನಾವಣೆಯಲ್ಲಿ ಶತಾಗತಾಯವಾಗಿ ಗೆಲ್ಲಲೇಬೇಕೆಂದು ಬಿಎಸ್‌ವೈ ಪಣತೊಟ್ಟಿದ್ದು, ಸಂಗಮೇಶ್ ಅವರನ್ನು ಮನವೋಲಿಸಿ ಅಮಾನತ್ತು ಆದೇಶವನ್ನು ಹಿಂಪಡೆದುಕೊಂಡಿದ್ದಾರೆ.
ನಿನ್ನೆ [ಮಂಗಳವಾರ] ಯಡಿಯೂರಪ್ಪ ಅವರು ಅತೃಪ್ತ ಮುಖಂಡರೊಂದಿಗೆ ಸಭೆ ನಡೆಸಿ ಜಮಖಂಡಿ ಬಿಜೆಪಿ ಭಿನ್ನಮತ ಶಮನ ಮಾಡಿದ್ದಲ್ಲದೇ, ಗೆಲುವಿನ ತಂತ್ರಗಳ ಪಾಠ ಮಾಡಿಬಂದಿದ್ದರು.
ಅದರಂತೆ ಇಂದು ನಡೆದ ಸಭೆಯಲ್ಲಿ ಸಂಗಮೇಶ್ ನಿರಾಣಿ ಬೆಂಬಲಿಗರು ಕಾರ್ಯಕರ್ತರು ಅಭಿಪ್ರಾಯ ಸಂಗ್ರಹಿಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರ ಗೆಲುವಿಗೆ ಶ್ರಮಿಸಲು ನಿರ್ಧಾರ ಮಾಡಲಾಗಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಸಿದ್ದು ನ್ಯಾಮೇಗೌಡ ಅವರ ಅಕಾಲಿಕ ಮರಣದಿಂದ ಜಮಖಂಡಿ ವಿಧಾನಸಭಾ ಉಪಚುನಾವಣೆಗೆ ಇದೇ ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನ.06ರಂದು ಫಲಿತಾಂಶ ಹೊರಬೀಳಲಿದೆ.