ಸರ್ಕಾರದಿಂದ ಕೊಟ್ಟ ಸೌಲಭ್ಯ ತಿರಸ್ಕರಿಸಿದ ಬಿಎಸ್‌ವೈ

First Published Jul 1, 2018, 7:58 AM IST
Highlights

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸರ್ಕಾರದಿಂದ ನೀಡಲಾದ ಈ ಸೌಕರ್ಯವನ್ನು ನಿರಾಕರಿಸಿದ್ದಾರೆ. ತಾವು ಬಯಸಿದ್ದ ನಿವಾಸವನ್ನು ತಮಗೆ ನೀಡದ ಕಾರಣ ಬೇರೆ ನಿವಾಸವನ್ನು ತಿರಸ್ಕರಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು :  ತಮ್ಮ ಅದೃಷ್ಟದ ನಿವಾಸ ನೀಡುವ ಬದಲು ರಾಜ್ಯ ಸರ್ಕಾರವು ಬೇರೆ ನಿವಾಸ ನೀಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಹಂಚಿಕೆ ಮಾಡಿರುವ ಸರ್ಕಾರಿ ವಸತಿಯನ್ನು ತಿರಸ್ಕರಿಸಿದ್ದಾರೆ. 

ರೇಸ್‌ವ್ಯೂ ಕಾಟೇಜ್‌ ನಂ.2 ನಿವಾಸ ನೀಡುವಂತೆ ಮನವಿ ಮಾಡಿದರೂ ರಾಜ್ಯ ಸರ್ಕಾರವು ರೇಸ್‌ ವ್ಯೂ ಕಾಟೇಜ್‌ ನಂ.4 ನಿವಾಸ ಹಂಚಿಕೆ ಮಾಡಿದೆ. ಹೀಗಾಗಿ ಸರ್ಕಾರಿ ನಿವಾಸಕ್ಕೆ ತೆರಳದೆ ಸ್ವಂತ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದಾರೆ.

ನನಗೆ ನೀಡಿರುವ ರೇಸ್‌ ವ್ಯೂ ಕಾಟೇಜ್‌ ನಂ.4 ನಿವಾಸವನ್ನು ತಿರಸ್ಕರಿಸಿದ್ದೇನೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರೇಸ್‌ ವ್ಯೂ ಕಾಟೇಜ್‌ ನಂ.2 ನಿವಾಸ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಅವರು ನನ್ನ ಕೋರಿಕೆಯನ್ನು ಮನ್ನಿಸದ ಕಾರಣ ಅವರ ನಿರ್ಧಾರವನ್ನು ತಿರಸ್ಕರಿಸಿದ್ದೇನೆ ಮತ್ತು ಸ್ವಂತ ಮನೆಯಲ್ಲಿಯೇ ಇರಲು ನಿರ್ಧಸಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!