
ಉಡುಪಿ: ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಉಡುಪಿಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಆನೆಗೊಂದಿ ಮಠದಲ್ಲಿ ಅತ್ಯಂತ ಗೌಪ್ಯವಾಗಿ ಭಾನುವಾರ ಮತ್ತು ಸೋಮವಾರ ಎರಡು ಯಾಗಗಳನ್ನು ನಡೆಸಿದ್ದಾರೆ.
ಇದರ ಜೊತೆಗೆ ಮುಂಬರುವ ಚಂದ್ರಗ್ರಹಣ ದಿಂದ ಯಾವುದೇ ದೋಷ ಸಂಭವಿಸದಂತೆಯೂ ಪ್ರಾರ್ಥನೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರಿನ ಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಸುಮಾರು 100 ಮಂದಿ ಪುರೋಹಿತರು ಈ ಶತಚಂಡಿಕಾಯಾಗ ಮತ್ತು ಮಹಾರುದ್ರ ಯಾಗವನ್ನು ನೆರವೇರಿಸಿದ್ದಾರೆ.
ಖುದ್ದು ಯಡಿಯೂರಪ್ಪ ಮತ್ತು ಅವರ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರು ಎರಡು ದಿನವೂ ಈ ಯಾಗಗಳಲ್ಲಿ ಭಾಗವಹಿಸಿದ್ದರು. ಶತಚಂಡಿಕಾಯಾಗ ಮಾಡಿ ಸಲ್ಲಿಸುವ ಪ್ರಾರ್ಥನೆ ನೆರವೇರುತ್ತದೆ ಎನ್ನುವ 100 ಅರ್ಚಕರಿಂದ ಪೂಜಾ ಕೈಂಕರ್ಯ | ಬಿಜೆಪಿಗರಿಗೂ ಮಾಹಿತಿ ಇಲ್ಲ ನಂಬಿಕೆ ಇರುವುದರಿಂದ ಬಿ.ಎಸ್.ಯಡಿಯೂರಪ್ಪ ಅವರು ಈ ಯಾಗವನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಯಾಗಗಳು ಎಷ್ಟು ಗೌಪ್ಯವಾಗಿದ್ದವು ಎಂದರೆ ಉಡುಪಿ ಜಿಲ್ಲೆಯ ಬಿಜೆಪಿ ನಾಯಕರಿಗೂ ಈ ಕುರಿತು ಸಣ್ಣ ಮಾಹಿತಿಯೂ ಇರಲಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.