ತಮ್ಮನಿಗೆ ನೌಕರಿ ಸಿಕ್ಕಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಅಣ್ಣ!

Published : Feb 05, 2019, 12:59 PM IST
ತಮ್ಮನಿಗೆ ನೌಕರಿ ಸಿಕ್ಕಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಅಣ್ಣ!

ಸಾರಾಂಶ

ಪಶ್ಚಿಮ ಬಂಗಾಳದಲ್ಲೊಬ್ಬ ಯುವಕ ತನ್ನ ತಮ್ಮನಿಗೆ ಕೆಲಸ ಸಿಕ್ಕಿದೆ ಎಂಬ ವಿಚಾರ ಅರಗಿಸಿಕೊಳ್ಳಲಾಗಿದೆ ಮನೆಗೇ ಬೆಮಕಿ ಇಟ್ಟ ವಿಚಿತ್ರ ಘಟನೆ ನಡೆದಿದೆ.

ತನ್ನ ಸಹೋದರನಿಗೆ ಸರ್ಕಾರಿ ಕೆಲಸ ಸಿಕ್ಕಿತು ಎಂಬ ಖುಷಿಯಲ್ಲಿ ನೆರೆಹೊರೆಯವರಿಗೆ ಸಿಹಿ ಹಂಚುವ, ಸ್ನೇಹಿತರಿಗೆ ಪಾರ್ಟಿ ಕೊಡಿಸುವವರ ಬಗ್ಗೆ ಕೇಳಿದ್ದೇವೆ. ಆದರೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮಖಾನ್‌ ಎಂಬ ಅಣ್ಣನೊಬ್ಬ ತನ್ನ ಸೋದರ ಸರ್ಕಾರಿ ಕೆಲಸ ಪಡೆದುಕೊಂಡಿದ್ದಕ್ಕೆ ಅಸೂಯೆ ತಾಳಲಾರದೆ ಇಡೀ ಮನೆಗೆ ಬೆಂಕಿ ಇಟ್ಟು ದ್ವೇಷ ಕಾರಿದ್ದಾನೆ.

ಈ ಘಟನೆಯಲ್ಲಿ ಸರ್ಕಾರಿ ಉದ್ಯೋಗ ಸಿಕ್ಕ ಖುಷಿಯಲ್ಲಿದ್ದ ಮಖಾನ್‌ನ ಸೋದರ ಗೋವಿಂದ, ಮತ್ತೊಬ್ಬ ಸೋದರ ಬಿಕಾಸ್‌, ಇಬ್ಬರು ಹೆಣ್ಣುಮಕ್ಕಳು ಕೂಡ ಕರಕಲಾಗಿದ್ದಾರೆ. ಈ ಸಹೋದರರು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ತಂದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೋದರ ಪೈಕಿ ಗೋವಿಂದನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರಕಿತು. ಇದೇ ಸಿಟ್ಟಿನಲ್ಲಿ ಮಖಾನ್‌ ಮನೆಗೆ ಬೆಂಕಿ ಹಚ್ಚಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?
ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ