ಮಗು ಆಸೆಗೆ ತಣ್ಣೀರು, ಬ್ರಿಟನ್‌ನಲ್ಲಿ ವೀರ್ಯ ಕೊರತೆ...ಕಾರಣ?

By Web DeskFirst Published Aug 26, 2018, 7:47 PM IST
Highlights

ಬ್ರಿಟನ್ ನಲ್ಲಿ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿದೆ. ಬ್ರೆಕ್ಸಿಟ್ ಒಪ್ಪಂದದ ದಿಂದ ಬ್ರಿಟನ್ ಹೊರ ಬಂದಿದ್ದೇ ಇದಕ್ಕೆ ಕಾರಣವೇ ಗಿತ್ತಿಲ್ಲ. ಬ್ರಿಟನ್ ನಲ್ಲಿ ವೀರ್ಯ ಕೊರತೆ ಉಂಟಾಗಿದೆ.

ಲಂಡನ್[ಆ.26] ಕೃತಕ ವಿಧಾನದ ಮೂಲಕ ಮಕ್ಕಳನ್ನು ಪಡೆಯಬೇಕು ಎಂದು ಮುಂದಾಗುವ ಬ್ರಿಟನ್ ದಂಪತಿಗಳಿಗೆ ನಿಜಕ್ಕೂ ಇದು ಕೆಟ್ಟ ಸುದ್ದಿ. ಬ್ರಿಟನ್ ನಲ್ಲಿ ವೀರ್ಯ ಕೊರತೆ ಎದುರಾಗಿದೆ.

ಉಳಿದ ಯುರೋಪಿಯನ್ ರಾಷ್ಟ್ರಗಳಿಂದ ಬ್ರಿಟನ್ ವೀರ್ಯ ಆಮದು ಮಾಡಿಕೊಳ್ಳುವುದಕ್ಕೆ ಬ್ರೆಕ್ಸಿಟ್ ಒಪ್ಪಂದದ ಕೆಲ ಅಂಶಗಳು ತಡೆಯಾಗಿದೆ ಎಂದು ಹೇಳಲಾಗಿದೆ.ಕಳೆದ ವರ್ಷ ವಿಶ್ವದಲ್ಲೆ ದೊಡ್ಡ ವೀರ್ಯ ಬ್ಯಾಂಕ್ ಎಂದು ಕರೆಸಿಕೊಳ್ಳುವ ಡೆನ್ಮಾರ್ಕ್ ವೀರ್ಯ ಬ್ಯಾಂಕ್ ನಿಂದ 3000ಕ್ಕೂ ಅಧಿಕ ಸ್ಯಾಂಪಲ್ಸ್ ತರಿಸಿಕೊಳ್ಳಲಾಗಿತ್ತು.

ಈ ಆಹಾರಗಳು ನಿಮ್ಮ ವೀರ್ಯಾಣುಗಳನ್ನು ವೃದ್ಧಿಸುತ್ತವೆ!

ಯುನೖಟೆಡ್ ಸ್ಟೇಟ್ಸ್ ನಿಂದ 4000 ಸ್ಯಾಂಪಲ್ ಆಮದು ಮಾಡಿಕೊಳ್ಳಲಾಗಿತ್ತು. ಇದೀಗ ಮಕ್ಕಳನ್ನು ಹೊಂದುವ ಆಸೆ ಇರುವ ದಂಪತಿ ವೀರ್ಯಕ್ಕಾಗಿ ಅಲೆದಾಡುವಂತಾಗಿದೆ. ದಾನಿಗಳ ಸಂಖ್ಯೆಯೂ ಗಣನೀಯವಾಗಿ ಇಳಿದು ಹೋಗಿದೆ ಎಂದು ವರದಿ ಹೇಳಿದೆ.

 


 

click me!